Select Your Language

Notifications

webdunia
webdunia
webdunia
webdunia

ಕೈಕಾಲುಗಳ ಕೂದಲು ತೆಗೆಯಲು ಶೇವ್ ಹಾಗೂ ವ್ಯಾಕ್ಸಿಂಗ್ ನಲ್ಲಿ ಯಾವುದು ಬೆಸ್ಟ್ ಎಂಬುದು ತಿಳಿಬೇಕಾ?

ಕೈಕಾಲುಗಳ ಕೂದಲು ತೆಗೆಯಲು ಶೇವ್ ಹಾಗೂ ವ್ಯಾಕ್ಸಿಂಗ್ ನಲ್ಲಿ ಯಾವುದು ಬೆಸ್ಟ್ ಎಂಬುದು ತಿಳಿಬೇಕಾ?
ಬೆಂಗಳೂರು , ಶನಿವಾರ, 6 ಜುಲೈ 2019 (11:39 IST)
ಬೆಂಗಳೂರು : ಮಹಿಳೆಯರು ತಮ್ಮ ಕೈಕಾಲುಗಳ ಅಂದವನ್ನು ಹೆಚ್ಚಿಸಲು  ಅಲ್ಲಿ ಬೆಳೆದಿರುವ ಕೂದಲನ್ನು ತೆಗೆಯುತ್ತಾರೆ. ಆದರೆ ಈ ಕೂದಲನ್ನು  ತೆಗೆಯಲು  ಅವರು ವ್ಯಾಕ್ಸ್ ಹಾಗೂ ಶೇವ್ ಮಾಡಿಕೊಳ್ಳುತ್ತಾರೆ. ಆದರೆ ಇವೆರಡರಲ್ಲಿ ಯಾವುದು ಉತ್ತಮ ಎಂಬ ಗೊಂದಲ ಹಲವರಲ್ಲಿದೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ.




ವ್ಯಾಕ್ಸ್ : ಸಾಮಾನ್ಯವಾಗಿ ವ್ಯಾಕ್ಸ್ ಮಾಡಿದರೆ ಚರ್ಮ ಸುಕ್ಕುಗಟ್ಟುತ್ತದೆ ಎಂದು ಹೇಳುತ್ತಾರೆ. ಆದರೆ ವ್ಯಾಕ್ಸಿಂಗ್  ತಜ್ಞರ ಪ್ರಕಾರ ವ್ಯಾಕ್ಸಿಂಗ್ ಮಾಡುವಾಗ ಚರ್ಮವನ್ನು ಬಿಗಿಯಾಗಿಟ್ಟುಕೊಳ್ಳಬೇಕು. ಇದರಿಂದ ನೋವು, ಹಾಗೂ ಎಳೆಯುವಿಕೆ ಕಡಿಮೆಯಾಗುತ್ತದೆ. ಇದರಿಂದ ಚರ್ಮ ಸುಕ್ಕುಗಟ್ಟುವುದಿಲ್ಲ ಎನ್ನುತ್ತಾರೆ ತಜ್ಞರು. ಹಾಗೇ ವ್ಯಾಕ್ಸಿಂಗ್ ಮಾಡುವುದರಿಂದ ಕೂದಲು ಬುಡದಿಂದ ಕಿತ್ತು ಬರುವುದರಿಂದ ಕೂದಲು ಬೇಗ ಹುಟ್ಟುವುದಿಲ್ಲ. ಹಾಗೂ ಕೂದಲ  ಬೆಳವಣೆಗೆ ಕೂಡ ಕ್ರಮೇಣ ಕಡಿಮೆಯಾಗುತ್ತದೆ.


ಶೇವ್ :  ನೀವು ಕೂದಲು ಶೇವ್ ಮಾಡುವುದರಿಂದ ಕೂದಲು ಬುಡದಿಂದ ಕಿತ್ತು ಬರುವುದಿಲ್ಲ. ಇದರಿಂದ ಕೂದಲು ಬೇಗ ಹುಟ್ಟುತ್ತದೆ. ಅಷ್ಟೇ ಅಲ್ಲದೇ  ಮತ್ತೆ ಹುಟ್ಟುವ ಕೂದಲು ತುಂಬಾ ದಪ್ಪವಾಗಿ, ಕಪ್ಪಾಗಿ ಹುಟ್ಟುತ್ತದೆ. ಹಾಗೇ ಶೇವ್ ಮಾಡಲು ಬ್ಲೇಡ್ ಗಳನ್ನು ಬಳಸುವುದರಿಂದ ಕೆಲಮೊಮ್ಮೆ ಗಾಯಗಳಾಗಿ ಇದರಿಂದ ಇನ್ ಫೆಕ್ಷನ್ ಆಗುವ ಸಂಭವವಿರುತ್ತದೆ.ಆದ್ದರಿಂದ ಕೈಕಾಲುಗಳ ಕೂದಲು ತೆಗೆಯಲು ಶೇವ್ ಗಿಂತ ವ್ಯಾಕ್ಸ್ ಉತ್ತಮ ಎಂದು ಹೇಳಲಾಗಿದೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯ ಈ ಸಮಸ್ಯೆಯಿಂದ ಮೊದಲ ರಾತ್ರಿ ಸಂಭೋಗಿಸಲು ಆಗಲಿಲ್ಲ