ರೌಡಿ ಶೀಟರ್ಸ್, ಪುಡಿ ರೌಡಿಗಳಿಗೆ ಖಡಕ್ ವಾರ್ನಿಂಗ್

ಮಂಗಳವಾರ, 27 ಆಗಸ್ಟ್ 2019 (16:24 IST)
ರೌಡಿಗಳಿಗೆ ಪೊಲೀಸರು ಖಡಕ್ ವಾರ್ನಿಂಗ್ ನೀಡಿದ್ದಾರೆ.  

ಗೌರಿ ಗಣೇಶ ಹಾಗೂ ಮೊಹರಂ ಹಬ್ಬಗಳ ಹಿನ್ನಲೆ ದಾವಣಗೆರೆಯಲ್ಲಿ ರೌಡಿಗಳ ಪೆರೇಡ್ ನಡೆಸಲಾಯಿತು.

ದಾವಣಗೆರೆ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಎಸ್ಪಿ ಹನುಮಂತರಾಯ ಅವರು ಸ್ಥಳೀಯ ರೌಡಿಶೀಟರ್ ಗಳಿಗೆ ವಾರ್ನ್ ಮಾಡಿದರು.

ಹಬ್ಬ ಹರಿದಿನಗಳಂದು ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಮಾಡಿಕೊಡದಂತೆ ಎಚ್ಚರಿಕೆ ನೀಡಿದ್ರು. ಸೆಪ್ಟೆಂಬರ್ 1 ರಿಂದ ಗೌರಿ ಗಣೇಶ ಹಬ್ಬ ಹಾಗೂ 10 ರಂದು ಮೊಹರಂ ಹಬ್ಬ ಶುರುವಾಗಲಿದೆ.

ಕಾನೂನು ಸವ್ಯವಸ್ಥೆ ದೃಷ್ಟಿಯಿಂದ ಮುಂಜಾಗ್ರತವಾಗಿ ರೌಡಿ ಪೆರೇಡ್ ನಡೆಸಲಾಗಿದೆ. ರೌಡಿಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಎಸ್ಪಿ ಹೇಳಿದ್ರು. 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮಕ್ಕಳಿಗೆ ವಿಚಿತ್ರ ರೋಗ : ಪಾಲಕರು ಕಂಗಾಲು – ದೌಡಾಯಿಸಿದ ವೈದ್ಯರು