Select Your Language

Notifications

webdunia
webdunia
webdunia
webdunia

ಪೊಲೀಸರನ್ನೇ ದೋಚಲು ಹೋಗಿ ಸಿಕ್ಕಿಹಾಕಿಕೊಂಡ ಖದೀಮರು

ಅಪರಾಧ ಸುದ್ದಿಗಳು
ಬೆಂಗಳೂರು , ಶುಕ್ರವಾರ, 9 ಜುಲೈ 2021 (09:50 IST)
ಬೆಂಗಳೂರು: ಕಳ್ಳರನ್ನು ಹಿಡಿಯೋದೇ ಪೊಲೀಸರ ಕಾಯಕ. ಅಂತಹದ್ದರಲ್ಲಿ ಅದೇ ಕಳ್ಳರೇ ಪೊಲೀಸರ ಬಳಿಗೆ ದೋಚಲು ಬಂದರೆ? ಇಂತಹದ್ದೊಂದು ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ.


ಮಫ್ತಿಯಲ್ಲಿದ್ದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮನೆಗೆ ಮರಳುತ್ತಿದ್ದಾಗ ಮೂವರು ಖದೀಮರು ಅವರು ಪೊಲೀಸರೆಂದು ಗುರುತಿಸದೇ ದರೋಡೆ ಮಾಡಲೆತ್ನಿಸಿದ್ದಾರೆ.ಸ್ಕೂಟರ್ ತಡೆದ ಕಳ್ಳರು ಮೊಬೈಲ್, ಪರ್ಸ್ ಕೇಳಿದ್ದಾರೆ. ಜೊತೆಗೆ ಚಾಕುವಿನಿಂದ ಇರಿಯಲು ನೋಡಿದ್ದಾರೆ. ಈ ವೇಳೆ ಸಬ್ ಇನ್ಸ್ ಪೆಕ್ಟರ್ ಜಾಣ್ಮೆಯಿಂದ ಪೊಲೀಸರಿಗೆ ಕರೆ ಮಾಡಿದ್ದಾರೆ.

ಇದರಿಂದ ಎಚ್ಚೆತ್ತುಕೊಂಡ ಖದೀಮರು ಸ್ಥಳದಿಂದ ಪರಾರಿಯಾಗಿದ್ದಾರೆ. ಆದರೆ ಈ ನಡುವೆ ಖದೀಮರ ಬೈಕ್ ಕೀ ಕಿತ್ತುಕೊಂಡಿದ್ದ ಸಬ್ ಇನ್ಸ್ ಪೆಕ್ಟರ್ ಎಲ್ಲಾ ಖದೀಮರೂ ಅರೆಸ್ಟ್ ಆಗಲು ಕಾರಣರಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಚ್ ಡಿಕೆ-ಸುಮಲತಾ ಸಮರ: ಇಂದು ಅಂಬಿ ಅಭಿಮಾನಿಗಳ ಸಭೆ