Select Your Language

Notifications

webdunia
webdunia
webdunia
webdunia

ದೃಶ್ಯಂ ಸಿನಿಮಾ ಪ್ರೇರಣೆಯಿಂದ ಈ ವ್ಯಕ್ತಿ ಮಾಡಿದ್ದೇನು ಗೊತ್ತಾ?!

ದೃಶ್ಯಂ ಸಿನಿಮಾ ಪ್ರೇರಣೆಯಿಂದ ಈ ವ್ಯಕ್ತಿ ಮಾಡಿದ್ದೇನು ಗೊತ್ತಾ?!
ನವದೆಹಲಿ , ಮಂಗಳವಾರ, 6 ಜುಲೈ 2021 (12:44 IST)
ನವದೆಹಲಿ: ದೃಶ್ಯಂ ಸಿನಿಮಾ ಪ್ರೇರಣೆಯಿಂದ ದೆಹಲಿಯಲ್ಲಿ ಕೊಲೆ ಆರೋಪಿಯೊಬ್ಬ ತನ್ನ ನೆರೆಮನೆಯವರ ಮೇಲೆ ಹಲ್ಲೆ ಆರೋಪ ಹೊರಿಸಲು ಮುಂದಾದ ಘಟನೆ ನಡೆದಿದೆ.


ನೆರೆಮನೆಯ ಓಂಬೀರ್ ಎಂಬವರ ತಾಯಿಯನ್ನು ಕೊಲೆ ಮಾಡಿದ್ದ ಆರೋಪಿ ಜೈಲು ಪಾಲಾಗಿದೆ. ಬಳಿಕ ಜಾಮೀನಿನ ಮೇಲೆ ಬಿಡುಗಡೆಗೆಯಾಗಿ ಮನೆಗೆ ಬಂದಿದ್ದ. ಆದರೆ ಹೇಗಾದರೂ ಮಾಡಿ ಈ ಪ್ರಕರಣದಿಂದ ಪಾರಾಗಲು ಓಂಬೀರ್ ಕುಟುಂಬಸ್ಥರ ಬಳಿಕ ಗೋಗೆರೆದು ತನ್ನ ವಿರುದ್ಧ ಸಾಕ್ಷಿ ಹೇಳದಂತೆ ಮನವಿ ಮಾಡಿದ್ದ. ಆದರೆ ಅವರು ಒಪ್ಪಿರಲಿಲ್ಲ.

ಹೀಗಾಗಿ ತನ್ನ ಬಾವ, ಸ್ನೇಹಿತರೊಂದಿಗೆ ಸೇರಿಕೊಂಡು ದೃಶ್ಯಂ ಸಿನಿಮಾದಲ್ಲಿರುವಂತೇ ಓಂಬೀರ್ ಕುಟುಂಬಸ್ಥರು ದಾಳಿ ನಡೆಸಿದಂತೆ ಸನ್ನಿವೇಶ ಸೃಷ್ಟಿಸಲು ಮುಂದಾದ. ಇದಕ್ಕಾಗಿ ನೆರೆಹೊರೆಯವರಲ್ಲಿ ಓಂಬೀರ್ ಮನೆಯವರು ನನ್ನ ಮೇಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಪುಕಾರು ಹಬ್ಬಿಸಿದ್ದ.

ಬಳಿಕ ಕಂಟ್ರಿಮೇಡ್ ಪಿಸ್ತೂಲ್ ತಂದಿಟ್ಟುಕೊಂಡಿದ್ದ. ತನ್ನ ಮೇಲೆ ಗುಂಡು ಹಾರಿದರೂ ಹೆಚ್ಚು ಗಾಯವಾಗದಂತೆ ವ್ಯವಸ್ಥೆ ಮಾಡಿ ಬಾವನ ಕೈಯಲ್ಲಿ ಶೂಟ್ ಮಾಡಿಸಿಕೊಂಡು ಸ್ನೇಹಿತರ ಮನೆಗೆ ಹೋಗಿ ಓಂಬೀರ್ ಕುಟುಂಬಸ್ಥರು ತನ್ನ ಮೇಲೆ ದಾಳಿ ಮಾಡಿದ್ದಾರೆಂದು ಆರೋಪಿಸಿದ್ದ. ಈ ಬಗ್ಗೆ ಪೊಲೀಸರಿಗೂ ದೂರು ನೀಡಲಾಗಿತ್ತು. ಆತನ ಜೊತೆ ಈ ‘ನಾಟಕ’ದಲ್ಲಿ ಭಾಗಿಯಾದ ಸಂಗಡಿಗರನ್ನು ವಿಚಾರಿಸಿದಾಗ ಪೊಲೀಸರಿಗೆ ಈ ಎಲ್ಲಾ ಸತ್ಯ ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಗಸ್ಟ್ ನಲ್ಲಿ ಕೊರೋನಾ ಮೂರನೇ ಅಲೆ: ಸೆಪ್ಟೆಂಬರ್ ನಲ್ಲಿ ತೀವ್ರ