Select Your Language

Notifications

webdunia
webdunia
webdunia
webdunia

ಗುರುವಿನ ಕೊಲೆಗೆ ರಿವೆಂಜ್?: ರೌಡಿ ಶೀಟರ್ ಸಿ.ಡಿ ನರಸಿಂಹ ಬರ್ಬರ ಹತ್ಯೆ

ಗುರುವಿನ ಕೊಲೆಗೆ ರಿವೆಂಜ್?: ರೌಡಿ ಶೀಟರ್ ಸಿ.ಡಿ ನರಸಿಂಹ ಬರ್ಬರ ಹತ್ಯೆ
ಬೆಂಗಳೂರು , ಸೋಮವಾರ, 29 ಜುಲೈ 2019 (14:10 IST)
ರೌಡಿ ಶೀಟರ್ ಸಿ.ಡಿ.ನರಸಿಂಹನ ಬರ್ಬರ ಹತ್ಯೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹಂತಕರಾದ  ಅನಿಲ ಅಲಿಯಾಸ್ ಲೇಔಟ್ ಅನಿ, ಕಿರಣ, ವಿನಯ್, ಮುಬಾರಕ್  ಸೇರಿ ನಾಲ್ವರನ್ನು  ಬ್ಯಾಡರಹಳ್ಳಿ ಇನ್ಸಪೆಕ್ಟರ್ ಬಿ.ಟಿ ಶ್ರೀನಿವಾಸ್  ಬಂಧಿಸಿದ್ದಾರೆ.  
ನರಸಿಹಂನ  ಹತ್ಯೆಗೆ ಹಳೆಯ ದ್ವೇಷವೇ  ಕಾರಣವಾಗಿದೆ ಎನ್ನಲಾಗಿದೆ. ಕೆಲವು ವರ್ಷಗಳ ಹಿಂದೆ  ಅಂದ್ರಹಳ್ಳಿಯ ಎಸ್.ಟಿ.ಡಿ. ಮಂಜ ಎಂಬುವನನ್ನು  ಸಿಡಿ ನರಸಿಂಹ ಕೊಲೆಮಾಡಿದ್ದನು.

ಈ ಕಾರಣಕ್ಕೆ ಮಂಜನ ಶಿಷ್ಯನಾದ ಲೇಔಟ್ ಅನಿ ತನ್ನ ಗುರುವಿನ ಹತ್ಯೆಯ ರಿವೆಂಜ್  ತೀರಿಸಿಕೊಳ್ಳಲು ವರ್ಷಗಳಿಂದ ಸ್ಕೆಚ್ ಹಾಕಿದ್ದನು.

ಸಿ.ಡಿ. ನರಸಿಂಹಗೆ ಲೇಔಟ್ ಅನಿ ಎರಡು, ಮೂರೂ ಬಾರಿ ಸ್ಕೆಚ್ ಹಾಕಿದ್ದರು ಅದು ಮಿಸ್ ಆಗಿ ಹೋಗಿತ್ತು.  ಆದರೆ  ಕಳೆದ 23 ರ ರಂದು ಬ್ಯಾಡರಹಳ್ಳಿಯ ತುಂಗಾನಗರದಲ್ಲಿ  ಅನಿ ಮತ್ತು ಅವನ ಗ್ಯಾಂಗ್ ಸೇರಿ ನರಸಿಂಹನ ಹತ್ಯೆ ಮಾಡಿದ್ದಾರೆ. 
ಮಂಜನ ಶಿಷ್ಯ  ಸಿ.ಡಿ ನರಸಿಂಹಗೆ ಸ್ಕೆಚ್ ಹಾಕುವ ವಿಚಾರ ಮೊದಲೇ ತಿಳಿದಿತ್ತು. ಆದ್ದರಿಂದ  ಅನಿ ಹುಡುಗರಿಗೆ ನರಸಿಂಹ ವಾರ್ನ್ ಕೂಡ ಮಾಡಿದ್ದನು. ಸಿ.ಡಿ. ನರಸಿಂಹನು ವಾರ್ನ್ ಮಾಡಿದ್ದೆ ಅನಿ ಮತ್ತು ಆತನ ಹುಡುಗರ ಕೋಪಕ್ಕೆ  ಕಾರಣವಾಗಿದೆ.

ಆತನನ್ನು ಮುಗಿಸಲೇಬೇಕೆಂಬ ಹಠತೊಟ್ಟು, ನರಸಿಂಹನ ಮನೆ ಬಳಿಯೇ  8 ಮಂದಿ ಹಂತಕರು ಸೇರಿ ಹತ್ಯೆಮಾಡಿದ್ದಾರೆ.
 ಸದ್ಯಕ್ಕೆ ನಾಲ್ವರನ್ನು ಪೊಲೀಸರು ಬಂಧಿಸಿದ್ದು ನವೀನ್, ಸೋಮಶೇಖರ್, ಮುನ್ನಾ ಅಲಿಯಾಸ್  ಮುನಿರಾಜು, ಪ್ರದೀಪ್ ಬಂಧನಕ್ಕೂ  ಬ್ಯಾಡರಹಳ್ಳಿ ಪೊಲೀಸರು ಬಲೆ ಬೀಸಿದ್ದಾರೆ. ಈ ಪ್ರಕರಣವನ್ನು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಬಿ.ಎಸ್.ಯಡಿಯೂರಪ್ಪಗೆ ಭರ್ಜರಿ ಟಾಂಗ್ ನೀಡಿದ ಡಿಕೆಶಿ