ಸಿಎಂ ಬಿ.ಎಸ್.ಯಡಿಯೂರಪ್ಪಗೆ ಭರ್ಜರಿ ಟಾಂಗ್ ನೀಡಿದ ಡಿಕೆಶಿ

ಸೋಮವಾರ, 29 ಜುಲೈ 2019 (13:35 IST)
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ಮಾಡಿ, ಇಂದು ಬಹುಮತ ಸಾಬೀತು ಪಡಿಸಿದ್ದೇ ತಡ ವಿಪಕ್ಷಗಳ ನಾಯಕರು ನೂತನ ಸಿಎಂ ವಿರುದ್ಧ ಭರ್ಜರಿಯಾಗಿ ಟಾಂಗ್ ನೀಡುತ್ತಿದ್ದಾರೆ.

ಅನರ್ಹ ಶಾಸಕರು ಸಿಎಂ ಆಗಲು ಅವಕಾಶ ಮಾಡಿಕೊಟ್ಟಿದ್ದಾರೆ. ನೀವು ಅವರನ್ನು ಯಾವತ್ತಿಗೂ ಕೈ ಬಿಡಬೇಡಿ. ಹೀಗಂತ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಟೀಕೆ ಮಾಡಿದ್ದಾರೆ.

ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಡಿಕೆಶಿ, ಅತೃಪ್ತ ಶಾಸಕರು ನಿಮಗೆ ಸಹಕಾರ ನೀಡಿದ್ದರಿಂದ ಅನರ್ಹಗೊಂಡಿದ್ದಾರೆ. ಅವರಿಗೆ ಏನೆಲ್ಲಾ ವ್ಯವಸ್ಥೆ, ಅನುಕೂಲ ಮಾಡಿಕೊಡುತ್ತೇನೆಂದು ನೀವು ಹೇಳಿದ್ರೋ ಅದನ್ನೆಲ್ಲಾ ಮಾಡಿಕೊಡಿ. ಸಚಿವ ಸ್ಥಾನ ಕೊಡ್ತಿರೋ ಅಥವಾ ಇನ್ನಾವುದೋ ಹುದ್ದೆ ಕೊಡ್ತಿರೋ ಕೊಡಿ ಅಂತ ಸಲಹೆ ನೀಡಿದ್ರು.

ಅನರ್ಹಗೊಂಡಿರೋ ಶಾಸಕರಿಗೆ ಪ್ರಮಾಣವಚನ ಕೊಡಿಸಿ ನಿಮ್ಮ ಜೊತೆಗೆ ಮಂತ್ರಿಯಾಗಿ ಮಾಡಿಬಿಡಿ ಅಂತ ವ್ಯಂಗ್ಯವಾಡಿದ್ರು.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನಾನು ದ್ವೇಷದ ರಾಜಕಾರಣ ಮಾಡುವುದಿಲ್ಲ- ಸಿಎಂ ಬಿಎಸ್ ಯಡಿಯೂರಪ್ಪ