ಇಂದು ವಿಶ್ವಾಸಮತಯಾಚನೆಯ ಹಿನ್ನೆಲೆ; ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡ್ತಾರಾ ರಮೇಶ್ ಕುಮಾರ್

ಸೋಮವಾರ, 29 ಜುಲೈ 2019 (11:05 IST)
ಬೆಂಗಳೂರು : ಇಂದು ನಡೆಯಲಿರುವ ಅಧಿವೇಶನದಲ್ಲಿ ಸ್ಪೀಕರ್ ರಮೇಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಇಂದು ನಡೆಯುವ ಅಧಿವೇಶನದಲ್ಲಿ ಈಗಾಗಲೇ ಸಿಎಂ ಆಗಿರುವ ಬಿ.ಎಸ್​. ಯಡಿಯೂರಪ್ಪ ಅವರು  ವಿಶ್ವಾಸಮತ ಯಾಚನೆ ಮಾಡಲಿದ್ದಾರೆ. ಅದರ ಜೊತೆಗೆ, ಇಂದೇ ಧನ ವಿಧೇಯಕ ಮಸೂದೆ ಕೂಡ ಮಂಡಿಸಲಿದ್ದಾರೆ ಎನ್ನಲಾಗಿದೆ.


ಈ ನಡುವೆ ಬಿಜೆಪಿ ಸರ್ಕಾರದಲ್ಲಿ ನಾನು ಒಂದು ದಿನವೂ ಕೆಲಸ ಮಾಡುವುದಿಲ್ಲ ಎಂದು ಹೇಳಿಕೆ ನೀಡಿದ್ದ ಸ್ಪೀಕರ್ ರಮೇಶ್ ಕುಮಾರ್ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಅಲ್ಲದೇ ಇಂದು ಬಿಜೆಪಿ ಶಾಸಕರು ಸ್ಪೀಕರ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವ ಸಾಧ್ಯತೆಯೂ ಇದೆ. ಅದಕ್ಕೂ ಮೊದಲೇ ರಮೇಶ್ ಕುಮಾರ್ ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಉಪಸ್ಪೀಕರ್ ರಮಾದೇವಿ ವಿರುದ್ಧ ಸಂಸದ ಅಜಂಖಾನ್ ಕ್ಷಮೆ ಯಾಚನೆ ಸಾಧ್ಯತೆ