Select Your Language

Notifications

webdunia
webdunia
webdunia
webdunia

ಕೊನೇ ಗಳಿಗೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ ವಿರಾಟ್ ಕೊಹ್ಲಿ

ಕೊನೇ ಗಳಿಗೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ ವಿರಾಟ್ ಕೊಹ್ಲಿ
ಮುಂಬೈ , ಸೋಮವಾರ, 29 ಜುಲೈ 2019 (10:09 IST)
ಮುಂಬೈ: ಇಂದು ವೆಸ್ಟ್ ಇಂಡೀಸ್ ವಿರುದ್ಧ ಕ್ರಿಕೆಟ್ ಸರಣಿಗಾಗಿ ಟೀಂ ಇಂಡಿಯಾ ಕೆರೆಬಿಯನ್‍ ರಾಷ್ಟ್ರಕ್ಕೆ ತೆರಳಲಿದೆ. ಆದರೆ ಇದಕ್ಕೆ ಮೊದಲು ನಾಯಕ ವಿರಾಟ್ ಕೊಹ್ಲಿ ಪತ್ರಿಕಾಗೋಷ್ಠಿ ನಡೆಸುತ್ತಾರೋ ಇಲ್ಲವೋ ಎಂಬ ಬಗ್ಗೆ ಇದ್ದ ಗೊಂದಲಗಳಿಗೆ ತೆರೆ ಬಿದ್ದಿದೆ.


ರೋಹಿತ್ ಶರ್ಮಾ ಜತೆಗಿನ ವೈಮನಸ್ಯದ ಬಗ್ಗೆ ಹೆಚ್ಚಿನ ಪ್ರಶ್ನೆಗಳು ಬರುತ್ತವೆ ಎಂಬ ಕಾರಣಕ್ಕೆ ಇಂದು ಕೊಹ್ಲಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಳ್ಳಲ್ಲ ಎಂಬ ಸುದ್ದಿಗಳು ಇತ್ತು. ಆದರೆ ಅದಕ್ಕೀಗ ಸ್ಪಷ್ಟನೆ ಸಿಕ್ಕಿದ್ದು, ಕೊಹ್ಲಿ ಪತ್ರಿಕಾಗೋಷ್ಠಿ ನಡೆಸುತ್ತಾರೆ ಎಂದು ಬಿಸಿಸಿಐ ಹೇಳಿದೆ.

ಯಾವುದೇ ವಿದೇಶ ಸರಣಿಗೆ ತೆರಳುವ ಮೊದಲು ಟೀಂ ಇಂಡಿಯಾ ನಾಯಕ ಮತ್ತು ಕೋಚ್ ಪತ್ರಿಕಾಗೋಷ್ಠಿ ನಡೆಸುವುದು ಸಂಪ್ರದಾಯ. ಆದರೆ ಈ ಬಾರಿ ಅದಕ್ಕೆ ಕೊಹ್ಲಿ ಬ್ರೇಕ್ ಹಾಕಲಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು. ಇಂದು ಸಂಜೆ 6 ಗಂಟೆಗೆ ಕೊಹ್ಲಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಳ್ಳುವುದು ಪಕ್ಕಾ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ-ರೋಹಿತ್ ನಡುವೆ ಸಂಧಾವೇರ್ಪಡಿಸಲು ಬಿಸಿಸಿಐ ಯತ್ನ