Publish Date: Mon, 29 Jul 2019 (09:57 IST)
Updated Date: Mon, 29 Jul 2019 (10:01 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ನಡುವೆ ಉಂಟಾಗಿದೆ ಎನ್ನಲಾಗಿರುವ ಭಿನ್ನಾಭಿಪ್ರಾಯವನ್ನು ಸರಿಪಡಿಸಲು ಬಿಸಿಸಿಐ ಮುಂದಾಗಿದೆ.
ಮಾಧ್ಯಮಗಳ ಮುಂದೆ ಇದೆಲ್ಲಾ ಕಟ್ಟುಕತೆ ಎಂದು ಬಿಸಿಸಿಐ ಹೇಳುತ್ತಾ ಬಂದಿದ್ದರೂ ಒಳಗಿನ ಬೇಗುದಿ ಸುಳ್ಳಲ್ಲ ಎಂಬುದು ಸ್ಪಷ್ಟವಾಗುತ್ತಲೇ ಇದೆ. ಇದೀಗ ಬಿಸಿಸಿಐ ಅಧಿಕಾರಿಗಳು ವಿಂಡೀಸ್ ಗೆ ತೆರಳಿ ಅಲ್ಲಿ ರೋಹತ್ ಮತ್ತು ಕೊಹ್ಲಿ ನಡುವೆ ಸಂಧಾನ ನಡೆಸಲಿದ್ದಾರೆ ಎಂಬ ಸುದ್ದಿ ಬಂದಿದೆ.
ಒಂದು ಗುಂಪಿನಲ್ಲಿ ಆಡುವಾಗ ಇಂತಹ ಭಿನ್ನಾಬಿಪ್ರಾಯಗಳು ಸಾಮಾನ್ಯ. ಆದರೆ ಇದನ್ನೆಲ್ಲಾ ಸರಿಪಡಿಸಬಹುದು ಎಂದು ಬಿಸಿಸಿಐ ಮೂಲಗಳು ಮಾಧ್ಯಮಗಳಿಗೆ ಹೇಳಿವೆ. ಹೀಗಾಗಿ ಇಬ್ಬರ ನಡುವಿನ ಭಿನ್ನಾಭಿಪ್ರಾಯ ನಿಜ ಎಂಬುದು ಸ್ಪಷ್ಟವಾಗಿದೆ.
b