ಮುಂಬೈ: ಟೀಂ ಇಂಡಿಯಾದಲ್ಲಿ ನಾಯಕ ವಿರಾಟ್ ಕೊಹ್ಲಿ ಮತ್ತು ಉಪ ನಾಯಕ ರೋಹಿತ್ ಶರ್ಮಾ ನಡುವೆ ತೆರೆಮರೆಯಲ್ಲಿ ಗುದ್ದಾಟ ನಡೆಯುತ್ತಿದೆ ಎಂಬ ವರದಿಗಳ ಬಗ್ಗೆ ಬಿಸಿಸಿಐ ಸಿಒಎ ವಿನೋದ್ ರಾಯ್ ಪ್ರತಿಕ್ರಿಯಿಸಿದ್ದಾರೆ.
ಮಾಧ್ಯಮಗಳು ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ವಿನೋದ್ ರಾಯ್ ಇದೆಲ್ಲವೂ ಮಾಧ್ಯಮದವರ ಸೃಷ್ಟಿ ಎಂದಿದ್ದಾರೆ.
‘ಇದೆಲ್ಲಾ ನೀವೇ ಸೃಷ್ಟಿ ಮಾಡಿದ ಕಟ್ಟು ಕತೆಗಳು. ಅಂತಹದ್ದೇನೂ ಇಲ್ಲ’ ಎಂದು ವಿನೋದ್ ರಾಯ್ ಹೇಳಿಕೊಂಡಿದ್ದಾರೆ. ಇದಕ್ಕೂ ಮೊದಲು ಬಿಸಿಸಿಐ ಅಧಿಕಾರಿಗಳೂ ವೈಮನಸ್ಯದ ಸುದ್ದಿಯನ್ನು ನಿರಾಕರಿಸಿದ್ದರು. ಆದರೆ ಈ ಬಗ್ಗೆ ರೋಹಿತ್ ಅಥವಾ ವಿರಾಟ್ ತುಟಿಪಿಟಕ್ ಎಂದಿಲ್ಲ.