Publish Date: Thu, 25 Jul 2019 (09:36 IST)
Updated Date: Thu, 25 Jul 2019 (09:38 IST)
ಮುಂಬೈ: ಟೀಂ ಇಂಡಿಯಾ ವಿಶ್ವಕಪ್ ಸೆಮಿಫೈನಲ್ ನಲ್ಲಿ ಸೋತಿದ್ದು ಅಭಿಮಾನಿಗಳಿಗೆ ತೀರಾ ಆಘಾತ ಮೂಡಿಸಿತ್ತು. ಹಾಗಿರಬೇಕಾದರೆ ನಾಯಕ ವಿರಾಟ್ ಕೊಹ್ಲಿ ಸ್ಥಿತಿ ಹೇಗಿದ್ದಿತ್ತು? ಈ ಬಗ್ಗೆ ಸ್ವತಃ ಕೊಹ್ಲಿ ಮಾತನಾಡಿದ್ದಾರೆ.
ವಿಶ್ವಕಪ್ ಸೋಲಿನಿಂದ ಹೊರಬಂದು ವಿಂಡೀಸ್ ಸರಣಿಗೆ ಸಿದ್ಧರಾಗುತ್ತಿರುವ ಕೊಹ್ಲಿ ಆ ಸೋಲಿನ ಬಗ್ಗೆ ಇದೇ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
‘ಪ್ರತೀ ಬಾರಿಯೂ ನಾನು ಸೋಲು, ಹಿನ್ನಡೆಯಿಂದಲೇ ಉತ್ತಮ ಮನುಷ್ಯನಾಗಿ ರೂಪುಗೊಂಡಿದ್ದೆ. ಎಲ್ಲವೂ ಚೆನ್ನಾಗಿ ಸಾಗುತ್ತಿರುವಾಗ, ಎಲ್ಲರೂ ಚೆನ್ನಾಗಿ ಆಡುತ್ತಿರುವಾಗ ಇದ್ದಕ್ಕಿದ್ದ ಹಾಗೆ ಬರುವ ಸೋಲು ತುಂಬಾ ಆಘಾತ ಕೊಡುತ್ತದೆ. ಆದರೆ ಅದರ ಬಗ್ಗೆಯೇ ಯೋಚನೆ ಮಾಡುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ಅದರಿಂದ ಹೊರಬಂದು ಬೆಟರ್ ಆಗಬೇಕಿದೆ’ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.