Select Your Language

Notifications

webdunia
webdunia
webdunia
webdunia

ಸಿದ್ಧಗಂಗಾ ಮಠಕ್ಕೆ ವಾಪಸ್ ಆದ ಶ್ರೀಗಳು

webdunia
ತುಮಕೂರು , ಸೋಮವಾರ, 3 ಡಿಸೆಂಬರ್ 2018 (19:49 IST)
ಆರೋಗ್ಯ ತಪಾಸಣೆಗಾಗಿ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ತೆರಳಿದ್ದ ಸಿದ್ದಗಂಗಾ ಶ್ರೀಗಳು ಶ್ರೀಮಠಕ್ಕೆ ವಾಪಸ್ಸಾಗಿದ್ದಾರೆ.

ಸಿದ್ದಗಂಗಾ ಮಠದಿಂದ ಬೆಂಗಳೂರಿನ‌ ಬಿಜಿಎಸ್ ಆಸ್ಪತ್ರೆಗೆ ತೆರಳಿದ್ದ ಶ್ರೀ ಶಿವಕುಮಾರ ಸ್ವಾಮೀಜಿಗಳು ಆಸ್ಪತ್ರೆಯಿಂದ ಮಠಕ್ಕೆ ಹಿಂದಿರುಗಿದ್ದಾರೆ‌‌‌‌. ಮಧ್ಯಾಹ್ನ 12.30 ಕ್ಕೆ ಹಳೆಮಠಕ್ಕೆ ಬಂದ ಶ್ರೀಗಳು ಕಾರಿನಿಂದ ಇಳಿದು ಪರಿಚಾರಕರ ನೆರವಿನಿಂದ ನಡೆದುಕೊಂಡೇ ಬಂದರು. ಮುಂದಿ‌ನ ಒಂದು ವಾರಗಳ ಕಾಲ ಶ್ರೀಗಳು ಹಳೆ ಮಠದಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ.

ಭಕ್ತರಿಗೆ ದರ್ಶನ ಸಿಗೋದಿಲ್ಲ ಅಂತಾ ಶ್ರೀಗಳ ಉಸ್ತುವಾರಿ ವೈದ್ಯ ಡಾ.ಪರಮೇಶ್ ಮಾಹಿತಿ‌ ನೀಡಿದ್ದಾರೆ‌. ಸದ್ಯ ಶ್ರೀಗಳ ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆ ಕಂಡಿದೆ. 5 ಮೆಟಲ್ ಹಾಗೂ 7 ಪ್ಲಾಸ್ಟಿಕ್ ಸ್ಟಂಟ್ ಗಳು ಶ್ರೀಗಳ ದೇಹದಲ್ಲಿವೆ. ಸಿದ್ದಗಂಗಾ ಆಸ್ಪತ್ರೆಯ ವೈದ್ಯರು 24 ಗಂಟೆಗಳ ಆರೈಕೆ ಮಾಡಲಿದ್ದಾರೆ‌ ಅಂತಾ ಇದೇ ವೇಳೆ ವೈದ್ಯ ಡಾ.ಪರಮೇಶ್ ಸ್ಪಷ್ಟಪಡಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ನಾಲೆಗೆ ಬೈಕ್ ಬಿದ್ದು ಒಂದೇ ಕುಟುಂಬದ ಮೂವರ ದುರ್ಮರಣ: ಸಚಿವ ಹೇಳಿದ್ದೇನು ಗೊತ್ತಾ?