Publish Date: Sun, 02 Dec 2018 (15:55 IST)
Updated Date: Sun, 02 Dec 2018 (15:57 IST)
ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಾಗಿರುವ ತುಮಕೂರಿನ ಸಿದ್ದಗಂಗಾ ಶ್ರೀಗಳಿಗೆ ಹೊಸದಾಗಿ 2 ಸ್ಟೆಂಟ್ಗಳನ್ನು ಅಳವಡಿಸಲಾಗಿದೆ.
ಬೆಳಿಗ್ಗೆ ಶ್ರೀಗಳಿಗೆ ಹೊಸದಾಗಿ ಸ್ಟೆಂಟ್ಗಳನ್ನು ಯಾವುದೇ ಶಸ್ತ್ರ ಚಿಕಿತ್ಸೆ ಇಲ್ಲದೆ ಅಳವಡಿಸಲಾಯಿತು. ನಂತರ ಅವರನ್ನು ವಾರ್ಡ್ಗೆ ದಾಖಲಿಸಲಾಗಿದೆ.
ಎಂಡೋಸ್ಕೊಪಿ ಮೂಲಕ ಶ್ರೀಗಳಿಗೆ ಹೊಸದಾಗಿ ಸ್ಟೆಂಟ್ ಅಳವಡಿಸಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ವೈದ್ಯರಾದ ರವೀಂದ್ರ ತಿಳಿಸಿದ್ದಾರೆ.
ಶ್ರೀಗಳಿಗೆ ಈ ಹಿಂದೆ 9 ಸ್ಟೆಂಟ್ಗಳನ್ನು ಅಳವಡಿಸಲಾಗಿತ್ತು. ಆದರೆ, 2 ಸ್ಟೆಂಟ್ಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಹಾಗಾಗಿ, ಹಳೆಯ ಸ್ಟೆಂಟ್ಗಳನ್ನು ತೆಗೆದು ಹೊಸದಾಗಿ 2 ಸ್ಟೆಂಟ್ಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಶ್ರೀಗಳಿಗೆ ಪಿತ್ತಕೋಶದಲ್ಲಿ ಸೋಂಕು ಉಂಟಾಗಿತ್ತು. ಹಾಗಾಗಿ ಅವರಿಗೆ ಜ್ವರ ಬರುತ್ತಿತ್ತು, ಸ್ಟೆಂಟ್ ಅಳವಡಿಕೆ ಬಳಿಕೆ ಶ್ರೀಗಳು ಈಗ ಆರೋಗ್ಯವಾಗಿದ್ದಾರೆ ಅವರನ್ನು ವಾರ್ಡ್ಗೆ ಸ್ಥಳಾಂತರಿಸಲಾಗಿದ್ದು ಪ್ರಜ್ಞೆ ಬಂದ ಬಳಿಕ ಅವರಿಗೆ ಶಿವಪೂಜೆ ಮಾಡಲು ವ್ಯವಸ್ಥೆ ಮಾಡುವುದಾಗಿ ಅವರು ತಿಳಿಸಿದ್ದಾರೆ.
ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಲ್ಲಿ ಅವರನ್ನು ಸಂಜೆ ಅಥವಾ ಬೆಳಿಗ್ಗೆ ಡಿಸ್ಟಾರ್ಜ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.