ಆಂಧ್ರ ಪ್ರದೇಶದಲ್ಲಿ ಮತ್ತೊಮ್ಮೆ ರಾಜಕೀಯ ಪ್ರತಿಭಟನೆಯ ಕಾವು ತಾರಕಕ್ಕೆ ಏರಿದೆ. ನಡೆದ ಭಾರೀ ಪ್ರತಿಭಟನೆಯಲ್ಲಿ ಸಂಸದರೊಬ್ಬರನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಆಂಧ್ರಪ್ರದೇಶಕ್ಕೆ ಪ್ರತ್ಯೇಕ ಸ್ಥಳಗಳಲ್ಲಿ ಮೂರು ರಾಜಧಾನಿಗಳನ್ನು ಮಾಡಲು ಅಲ್ಲಿನ ಸರಕಾರ ಮುಂದಾಗಿದೆ. ಸರಕಾರದ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ಸರಕಾರದ ಉದ್ದೇಶಿತ ಮಸೂದೆಯನ್ನು ವಿರೋಧಿಸಿ ಉಗ್ರ ಪ್ರತಿಭಟನೆ ನಡೆದಿದೆ. ಈ ಸಂದರ್ಭದಲ್ಲಿ ಟಿಡಿಪಿ ಸಂಸದರಾಗಿರೋ ಜಯದೇವ್ ಗಲ್ಲಾ ಬಂಧನಕ್ಕೆ ಒಳಗಾಗಿದ್ದಾರೆ.
ಅಮರಾವತಿಯಲ್ಲಿ ಪೊಲೀಸರೊಂದಿಗೆ ಗಲ್ಲಾ ವಾಗ್ದಾದ, ಘರ್ಷಣೆ ನಡೆಸಿದ್ದೇ ಅವರನ್ನು ಬಂಧಿಸಲು ಕಾರಣವಾಗಿದೆ.