Publish Date: Tue, 21 Jan 2020 (10:42 IST)
Updated Date: Tue, 21 Jan 2020 (10:45 IST)
ಬೆಂಗಳೂರು : ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬಿಸಿಯೂಟ ಕಾರ್ಯಕರ್ತರು ಇಂದು ಬೆಂಗಳೂರಿನಲ್ಲಿ ಬೃಹತ್ ಧರಣಿ ಹಮ್ಮಿಕೊಂಡಿದ್ದಾರೆ.
ಇಂದಿನಿಂದ 2ದಿನಗಳ ಕಾಲ ಫ್ರೀಡಂಪಾರ್ಕ್ ನಲ್ಲಿ ಬಿಸಿಯೂಟ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಕನಿಷ್ಠ ವೇತನ, ಕೆಲಸದ ಭದ್ರತೆಗೆ ಆಗ್ರಹಿಸಿ ಹೋರಾಟ ನಡೆಸಲಿದ್ದಾರೆ.
ರೈಲ್ವೆ ನಿಲ್ದಾಣದ ಬಳಿ ರಾಜ್ಯದ ಹಲವು ಕಡೆಯಿಂದ ಆಗಮಿಸುತ್ತಿರುವ ಬಿಸಿಯೂಟ ಕಾರ್ಯಕರ್ತರು ಒಟ್ಟಾಗಿ ಮೆರವಣಿಗೆಯ ಮೂಲಕ ಹೊರಟು ಫ್ರೀಡಂಪಾರ್ಕ್ ತಲುಪಿ ಅಲ್ಲೇ 2 ದಿನಗಳ ಕಾಲ ಪ್ರತಿಭಟನೆ ಮಾಡಲಿದ್ದಾರೆ.