Select Your Language

Notifications

webdunia
webdunia
webdunia
webdunia

ರೇಣುಕಾಸ್ವಾಮಿ ತಂದೆ ಕಣ್ಣೀರು: ಮಾನವೀಯತೆಯಿಂದಾದ್ರೂ ಸೊಸೆಗೆ ಸರ್ಕಾರಿ ನೌಕರಿ ಕೊಡಿಸಿ

Renukaswamy father

Krishnaveni K

ಚಿತ್ರದುರ್ಗ , ಭಾನುವಾರ, 8 ಜೂನ್ 2025 (20:53 IST)
ಚಿತ್ರದುರ್ಗ: ಜಿಲ್ಲೆಯ ರೇಣುಕಾಸ್ವಾಮಿ ಕೊಲೆಗೀಡಾಗಿ ಇಂದಿಗೆ ಒಂದು ವರ್ಷವಾಗಿದೆ. ಈ ಹಿನ್ನಲೆಯಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿರುವ ತಂದೆ ಕಾಶೀನಾಥಯ್ಯ ಮಾನವೀಯತೆ ದೃಷ್ಟಿಯಿಂದಾದ್ರೂ ನಮ್ಮ ಸೊಸೆಗೆ ಸರ್ಕಾರೀ ನೌಕರಿ ಕೊಡಿಸಿ ಎಂದಿದ್ದಾರೆ.

ನಟ ದರ್ಶನ್ ಮತ್ತು ಸಹಚರರಿಂದ ಹಲ್ಲೆಗೊಳಗಾಗಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಗೀಡಾಗಿದ್ದಾನೆ ಎನ್ನಲಾಗಿದೆ. ಆತ ಹತ್ಯೆಗೀಡಾಗುವಾಗ ಪತ್ನಿ ಗರ್ಭಿಣಿಯಾಗಿದ್ದಳು. ಇದೀಗ ಆತನಿಗೆ ಗಂಡು ಮಗುವಾಗಿದ್ದು ಪತಿಯಿಲ್ಲದೇ ಪತ್ನಿ ಏಕಾಂಗಿ ಜೀವನ ನಡೆಸುತ್ತಿದ್ದಾಳೆ.

ಇಂದು ಮಗನ ಹತ್ಯೆಯಾಗಿ ಒಂದು ವರ್ಷವಾದ ಹಿನ್ನಲೆಯಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ ರೇಣುಕಾಸ್ವಾಮಿ ತಂದೆ ಕಣ್ಣೀರು ಹಾಕಿದ್ದಾರೆ. ಪುತ್ರ ಶೋಕ ನಿರಂತರಂ ಎನ್ನುವಂತೆ ಮಗನ ಸಾವನ್ನು ನಮಗೆ ಮರೆಯಲು ಸಾಧ್ಯವಾಗುತ್ತಿಲ್ಲ. ಆದರೂ ನಮ್ಮ ಮೊಮ್ಮಗನ ಆಟ-ಪಾಠದಲ್ಲಿ ಮರೆಯುವ ಪ್ರಯತ್ನ ಮಾಡುತ್ತಿದ್ದೇವೆ.

ಆದರೆ ನಮ್ಮ ಸೊಸೆ ಸಣ್ಣ ವಯಸ್ಸಿನಾಕೆ. ಈಗಾಗಲೇ ಸರ್ಕಾರ, ಮಾಧ್ಯಮಗಳು ಕೋರ್ಟು, ಕಚೇರಿ ಎಂದು ನಮಗೆ ಸಾಕಷ್ಟು ಸಹಾಯ ಮಾಡಿದೆ. ಆದರೆ ಸೊಸೆಗೆ ಸರ್ಕಾರಿ ಕೆಲಸ ಕೊಡಿಸಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದೆವು. ಆದರೆ ಆಕೆಗೆ ಸರ್ಕಾರಿ ಕೆಲಸ ಕೊಡಿಸಲು ನಿಯಮದಲ್ಲಿ ಅವಕಾಶವಿಲ್ಲ ಎಂದು ಹೇಳಿದ್ದಾರೆ. ಆದರೂ ಮಾನವೀಯತೆ ದೃಷ್ಟಿಯಿಂದ ಆಕೆಗೆ ಕೆಲಸ ಕೊಡಿಸಿ, ಜೀವನಕ್ಕೆ ದಾರಿ ಮಾಡಿಕೊಡಿ ಎಂದು ಕಣ್ಣೀರು ಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರಪ್ಪ ಮನೆ ಮದುವೆಯಲ್ಲಿ ಸಿದ್ದರಾಮಯ್ಯ: ಒಳಗೊಳಗೆ ಎಲ್ಲಾ ಚೆನ್ನಾಗೇ ಇರ್ತೀರಾ ನೆಟ್ಟಿಗರ ಟಾಂಗ್