Select Your Language

Notifications

webdunia
webdunia
webdunia
webdunia

Darshan: ದರ್ಶನ್ ಗೆ ವಿದೇಶಕ್ಕೆ ಹೋಗಲೂ ಅನುಮತಿ ಸಿಕ್ತು, ಇನ್ನೇನು ಬೇಕು

Darshan

Krishnaveni K

ಬೆಂಗಳೂರು , ಶನಿವಾರ, 31 ಮೇ 2025 (11:05 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಜಾಮೀನಿನ ಮೇಲೆ ಹೊರಗಡೆಯಿರುವ ನಟ ದರ್ಶನ್ ಗೆ ಈಗ ಶೂಟಿಂಗ್ ನಲ್ಲಿ ಭಾಗಿಯಾಗಲು ವಿದೇಶಕ್ಕೆ ಹೋಗಲು ಕೋರ್ಟ್ ಅನುಮತಿ ನೀಡಿದೆ. ಇದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಗಳಾಗುತ್ತಿವೆ.

ಚಿತ್ರದುರ್ಗದ ರೇಣುಕಾಸ್ವಾಮಿಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಆರೋಪದಲ್ಲಿ ಬಂಧಿತರಾಗಿರುವ 17 ಆರೋಪಿಗಳಲ್ಲಿ ದರ್ಶನ್ ಎ2 ಆರೋಪಿ. ಎಲ್ಲಾ ಆರೋಪಿಗಳೂ ಈಗ ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾರೆ. 

ನಟ ದರ್ಶನ್ ಈಗ ಡೆವಿಲ್ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಕೋರ್ಟ್ ಅನುಮತಿ ಪಡೆದು ರಾಜಸ್ಥಾನ್ ಗೆ ಶೂಟಿಂಗ್ ಗೆ ಹೋಗಿಬಂದಿದ್ದರು. ಇದೀಗ ಡೆವಿಲ್ ಶೂಟಿಂಗ್ ಗಾಗಿ 25 ದಿನಗಳಿಗೆ ವಿದೇಶಕ್ಕೆ ತೆರಳಲು ಅನುಮತಿ ಕೋರಿದ್ದರು. ಅದರಂತೆ ಕೋರ್ಟ್ ಅವರ ಮನವಿಯನ್ನು ಪುರಸ್ಕರಿಸಿದೆ.

ಇದರ ಬಗ್ಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ದರ್ಶನ್ ಕಾಲೆಳೆದಿದ್ದಾರೆ. ವಿದೇಶಕ್ಕೆ ಹೋಗಲೂ ಅನುಮತಿ ಸಿಕ್ಕಾಯ್ತು. ಇನ್ನೇನು, ಕೆಲವು ದಿನ ಆದ ಬಳಿಕ ಕೇಸ್ ನ್ನೇ ಮರೆತು ಬಿಡುತ್ತಾರೆ. ಕೇಸ್ ಕೂಡಾ ಹಳ್ಳ ಹಿಡಿಯುತ್ತದೆ ಎಂದು ಕಿಡಿ ಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡದ ತಂಟೆಗೆ ಬಂದ್ರೆ... ಕಮಲ್ ಹಾಸನ್ ಗೆ ಬೆಂಡೆತ್ತಿದ ರಚಿತಾ ರಾಮ್: ಶಿವಣ್ಣಗೇ ಗೂಟ ಇಟ್ರಾ ಎಂದ ಫ್ಯಾನ್ಸ್