Select Your Language

Notifications

webdunia
webdunia
webdunia
webdunia

ಪ್ರತಾಪ್​​ ಸಿಂಹ ವಿರುದ್ಧ FIR ದಾಖಲು

ಪ್ರತಾಪ್​​ ಸಿಂಹ ವಿರುದ್ಧ FIR ದಾಖಲು
bangalore , ಬುಧವಾರ, 27 ಡಿಸೆಂಬರ್ 2023 (20:44 IST)
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆ, ಸಂಸದ ಪ್ರತಾಪಸಿಂಹ ವಿರುದ್ಧ ನಗರದ ದೇವರಾಜ ಪೊಲೀಸ್ ಠಾಣೆಯಲ್ಲಿ ಮಂಗಳವಾರ ರಾತ್ರಿ ಎಫ್‌ಐಆರ್ ದಾಖಲಾಗಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯಕುಮಾರ್ ಪ್ರತಾಪಸಿಂಹ ವಿರುದ್ದ ದೂರು ದಾಖಲಿಸಿದ್ದರು.

ಹುಣಸೂರಿನಲ್ಲಿ ನಡೆದ ಹನುಮ ಜಯಂತಿ ಕಾರ್ಯಕ್ರಮದ ವೇಳೆ, ಪ್ರತಾಪಸಿಂಹ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು 'ಸೋಮಾರಿ ಸಿದ್ಧ' ಎಂದು ಏಕವಚನದಲ್ಲಿ ಮಾತನಾಡಿ, ಜಾತಿ ಜಾತಿಗಳ ನಡುವೆ ದ್ವೇಷ ಹರಡಿಸುವ ಕೆಲಸ ಮಾಡಿದ್ದಾರೆಂದು ಸುಳ್ಳು ಆರೋಪ ಮಾಡಿದ್ದಾರೆ. ಪ್ರತಾಪ ಸಿಂಹ. ಹಿಂದೂ ಮುಸ್ಲಿಂ ಸಮುದಾಯದ ನಡುವೆ ಕೋಮುಗಲಭೆ ಮಾಡಲು ನಿರಂತರ ಪ್ರಯತ್ನ ಮಾಡಿದ್ದಾರೆ. ದಳ್ಳುರಿ ಸೃಷ್ಟಿಸಿ ಅಶಾಂತಿ ಉಂಟುಮಾಡುತ್ತಿದ್ದಾರೆ. ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಎಂದು ವಿಜಯಕುಮಾರ್ ದೂರಿನಲ್ಲಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ವರ್ಷಾಚರಣೆಗೆ ನಂದಿಬೆಟ್ಟದ ಪ್ರವಾಸಿಗರಿಗೆ ನಿರ್ಬಂಧ..!