Select Your Language

Notifications

webdunia
webdunia
webdunia
Monday, 7 April 2025
webdunia

ಮೊದಲು ಗ್ಯಾರಂಟಿ ಘೋಷಣೆಯ ಹಣ ಕೊಡಲಿ ರವಿಕುಮಾರ್

Ravikumar was the first to pay for the declaration of guarantee
bangalore , ಗುರುವಾರ, 25 ಮೇ 2023 (20:00 IST)
ಒಬ್ಬ ಪೊಲೀಸ್ ಅಧಿಕಾರಿಯೂ ಕೇಸರಿ ಬಟ್ಟೆ ಧರಿಸಿ ಬಂದಿಲ್ಲ. ಕೇಸರೀಕರಣ ಮಾಡ್ತಿದ್ದೀರಾ ಅಂತ ಡಿಸಿಎಂ ಪ್ರಶ್ನೆ ಮಾಡಿದ್ದಾರೆ. ಡಿಕೆ ಶಿವಕುಮಾರ್ ಮೊದಲು ತಮ್ಮ ಗ್ಯಾರಂಟಿ ಕಾರ್ಡ್ ಘೋಷಣೆಯ ಹಣ ಕೊಡಲಿ. ಆಮೇಲೆ ಪೊಲೀಸ್ ಇಲಾಖೆ ಕೇಸರೀಕರಣ ಆಗಿದೆಯೋ ಇಲ್ಲವೋ ನೋಡೋಣ ಎಂದು ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಹೇಳಿದ್ದಾರೆ. ಈಗ ನಿಮ್ಮ ಸರ್ಕಾರ ಬಂದಿದೆ, ಪೊಲೀಸರು ಕೆಲಸ ಮಾಡ್ತಾರೆ. ಆಗ ನಮ್ಮ ಸರ್ಕಾರ ಇತ್ತು, ಆಗಲೂ ಕೆಲಸ ಮಾಡಿದ್ದಾರೆ. ನಮ್ಮ ಇಬ್ಬರು ಶಾಸಕರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಭಯೋತ್ಪಾದಕ, ನಕ್ಸಲ್ ಬೆಂಬಲಿಗರ ಪರವಾಗಿ ನಿಂತಿದ್ದೀರಾ? ಟಿಪ್ಪು ಜಯಂತಿ ಬೇಡ ಅಂತ ಹೇಳಿದ್ದಕ್ಕೆ ನಮ್ಮವರ ಮೇಲೆ ಎಫ್ಐಆರ್ ಹಾಕ್ತೀರಾ? ಬಂಟ್ವಾಳದಲ್ಲಿ ಭಯೋತ್ಪಾದಕ ಸಂಘಟನೆಗೆ ಬೆಂಬಲ ನೀಡುವವರ ಮೇಲೆ ಎಫ್ಐಆರ್ ಹಾಕಿಲ್ಲ. ಧರ್ಮ ರಕ್ಷಣೆ ಮಾಡುವ ನಮ್ಮ ಶಾಸಕರು, ಕಾರ್ಯಕರ್ತರ ಮೇಲೆ ಎಫ್ಐಆರ್ ಹಾಕ್ತೀರಿ ಎಂದು ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಸರ್ಕಾರದ ವಿರುದ್ದ ಹರಹಾಯ್ದ ಛಲವಾದಿ ನಾರಾಯಣಸ್ವಾಮಿ