ಸದ್ಯಕ್ಕೆ ಎಲ್ಲ ಅಂಡರ್ ಪಾಸ್ ಗಳ ಆಡಿಟ್ ಮಾಡಲಾಗಿದೆ.ಅಂಡರ್ ಪಾಸ್ ಗಳ ಸ್ಥಿತಿ ಗತಿಗಳ ಬಗ್ಗೆ ವರದಿ ಬಂದಿದೆ.53 ಅಂಡರ್
ಪಾಸ್ ಗಳು ಹಾಗೂ 18 ರೈಲ್ವೇ ಬ್ರಿಡ್ಜ್ ಗಳ ಅಂಡರ್ ಪಾಸ್ ಗಳಿವೆ.ಅದರಲ್ಲಿ ಕೆಲವಕ್ಕೆ ಸಂಪೂರ್ಣ ಬ್ರಿಡ್ಜ್ ಕ್ಲೋಸ್ ಮಾಡುವ ಅವಶ್ಯಕತೆ ಇದೆ.ಮತ್ತಷ್ಟು ಕಡೆ ಅಕ್ಕ ಪಕ್ಕದ ರಸ್ತೆಗಳ ನೀರಿನ ಹರಿವು ಅಂಡರ್ ಪಾಸ್ ಸೇರದಂತೆ ಚರಂಡಿ ವ್ಯವಸ್ಥೆ ಮಾಡಬೇಕಿದೆ ಎಂದು ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್ ಹೇಳಿದ್ದಾರೆ.
15 ದಿನಗಳಲ್ಲಿ ಎಲ್ಲ ಅಂಡರ್ ಪಾಸ್ ಗಳ ದುರಸ್ತಿ ಮಾಡಲಾಗುವುದು.ಲಾ ಮರಿಡಿಯನ್ ಹೋಟೆಲ್ ಮುಂಭಾಗದ ಅಂಡರ್ ಪಾಸ್ ನಲ್ಲಿ ದುರಸ್ತಿ ಕಾರ್ಯ ನಡೆಸಬೇಕಿದೆ.ಕೆಆರ್ ಸರ್ಕಲ್ ನಲ್ಲಿನ ಅಂಡರ್ ಪಾಸ್ ನಲ್ಲಿ ಪ್ರಾಯೋಗಿಕವಾಗಿ ಕಾಮಗಾರಿ ನಡೆಸಲಾಗುವುದು.ಕಾಮಗಾರಿ ಪ್ರಯುಕ್ನ 15 ದಿನಗಳ ಕಾಲ ಕ್ಲೋಸ್ ಮಾಡಲಾಗುವುದು.ಮಳೆ ಸಮಯ ಆಧಾರಿಸಿ ಅಂಡರ್ ಪಾಸ್ ಗಳನ್ನು ಕ್ಲೋಸ್ ಮಾಡಲಾಗುದು ಹಾಗೂ ಸಂಚಾರ ಮುಕ್ತಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತುಷಾರ್ ಗಿರಿನಾಥ್ ಹೇಳಿದ್ದಾರೆ.