Select Your Language

Notifications

webdunia
webdunia
webdunia
webdunia

ಅದೆಷ್ಟೋ ಮುಚ್ಚಿ ಹೋಗಿದ್ದ ಇಂದಿರಾ ಕ್ಯಾಂಟಿನ್ ಗಳಿಗೆ ಮರುಜೀವ…!

webdunia
bangalore , ಗುರುವಾರ, 25 ಮೇ 2023 (18:01 IST)
ಅಮ್ಮಾ ಕ್ಯಾಂಟೀನ್ ಮಾದರಿಯಲ್ಲೇ ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಆರಂಭಗೊಂಡಿತ್ತು. ಬಡವರ ಮಧ್ಯಮ ವರ್ಗದ ಜನರ ಪಾಲಿಗೆ ಅಕ್ಷಯ ಪಾತ್ರೆಯಾಗಿದ್ದ ಇಂದಿರಾ ಕ್ಯಾಂಟಿನ್ ಹಲವೆಡೆ ಅನೇಕ ಕಾರಣಗಳಿಂದ ಮುಚ್ಚಿತ್ತು. ಈಗ  ಮುಚ್ಚಿಹೋಗಿದ್ದ ಕ್ಯಾಂಟಿನ್ಗಳಿಗೆ ಕಾಂಗ್ರೆಸ್ ಸರ್ಕಾರ ಮತ್ತೆ ಮರುಜೀವ ನೀಡುತ್ತಿದ್ದು ಜನ ಫುಲ್ ಖುಷ್ ಆಗಿದ್ದಾರೆ. ಸಿದ್ದರಾಮಯ್ಯ ಅವರ ಕನಸಿನ ಕೂಸಗಿದ್ದ ಇಂದಿರಾ ಕ್ಯಾಂಟಿನ್ ಗಳು ರಾಜ್ಯದ ಎಲ್ಲೆಡೆ ಆರಂಭಗೊಂಡಿದ್ದವು, ಬಡವರಿಗೆ , ಮಧ್ಯಮ ವರ್ಗದ ಜನರಿಗೆ ಕೈ ಗೆಟಕುವ ಬೆಲೆಯಲ್ಲಿ ಆಹಾರ ಪೂರೈಸುವಲ್ಲಿ ಯಶಸ್ವಿಯಾಗಿ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ನಾನಾ ಸಮಸ್ಯೆಗಳು ಹಾಗೂ ನಾನಾ ಕಾರಣಗಳಿಂದ ಕೆಲವೆಡೆ ಇಂದಿರಾ ಕ್ಯಾಂಟಿನ್ ಗಳನ್ನು ಮುಚ್ಚಲಾಗಿತ್ತು, ಇನ್ನೂ ಹಲವೆಡೆ ಅನೇಕ ಈ ಕ್ಯಾಂಟಿನ್ ಗಳು ಛಲ ಬಿಡದ ತಿಮಿಕ್ರಮನಂತೆ ಸಾವಿರ ಸಮಸ್ಯೆಗಳು ಎದುರಾದರು ಎಲ್ಲಾವನ್ನು ಎದುರಿಗೆ ಜನರ ಹಸಿವೂ ನೀಗಿಸುವಲ್ಲಿ ಯಶಸ್ವಿಯಾಗಿದ್ದವು,ಇನ್ನು ಸಿಎಂ ಸಿದ್ದರಾಮಯ್ಯ  ಮುಚ್ಚಿ ಹೋಗಿರುವ ಇಂದಿರಾ ಕ್ಯಾಂಟಿನ್ ಗಳನ್ನು  ಮತ್ತೆ ತೆರೆಯುವುದಾಗಿ ಭರವಸೆ ನೀಡಿದ್ದರಿಂದ, ಅದೆಷ್ಟೋ  ಹಸಿದಾಗ ಇಂದಿರಾ ಕ್ಯಾಂಟಿನ್ ಗಳ ಬಳಿ ಬಂದು ಹೊಟ್ಟೆ ತುಂಬಾ ಊಟ ಮಾಡುತ್ತಿದ್ದ ಜೀವಗಳು ಖುಷ್ ಆಗಿದ್ದಾರೆ.

ಇನ್ನು ಸಿಎಂ ಸಿದ್ದು ಆದೇಶದಂತೆ ಎಚ್ಚೆತ್ತಾ ಬಿಬಿಎಂಪಿ . ಈಗಾಗಲೇ ಇಂದಿರಾ ಕ್ಯಾಂಟೀನ್ ಮರು  ಜೀವ ಕೊಡಲು ಸಿದ್ದವಾಗಿದೆ ಇದೇ ವಿಚಾರವಾಗಿ ಮಾತನಾಡಿದ ಬಿಬಿಎಂಪಿ ವಿಶೇಷ ಆಯುಕ್ತ ಜಯರಾಂ ರಾಯ್‌ಪುರ  ಕೆಲವು ಕಡೆ ಕ್ಯಾಂಟೀನ್‌ನಲ್ಲಿ ಡಿಮಾಂಡ್ ಕಡಿಮೆ ಆಗಿತ್ತು  ಇನ್ನು ಕೆಲವೆಡೆ ಉತ್ತೇಜನ ಕಡಿಮೆ ಆಗಿತ್ತು ಅಂತ ಕ್ಲೋಸ್ ಆಗಿತ್ತು ಇರೋ ಕ್ಯಾಂಟೀನ್‌ಗಳ ಪೈಕಿ ೧೦ ಮೊಬೈಲ್ ಕ್ಯಾಂಟೀನ್ ಕ್ಲೋಸ್ ಆಗಿದೆ ೨೪೩ ಕಡೆಯೂ ಕ್ಯಾಂಟೀನ್ ಆರಂಭಿಸುತ್ತೇವೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ ಎಂದು ತಿಳಿಸಿದ್ದಾರೆ. 

ಹೌದು ಖಾಸಗಿ ಹೋಟೆಲ್ ಗಳಲ್ಲಿ ಒಂದು ಹೊತ್ತಿನ ಊಟಕ್ಕೆ 70 – 80 ರೂಪಾಯಿಗಳಷ್ಟು ನೀಡ ಬೇಕಾಕಿದೆ ಆದ್ರೆ ಇಂದಿರಾ ಕ್ಯಾಂಟಿನ್ ನಲ್ಲಿ 10 ರೂಪಾಯಿಗೆ ಹೊಟ್ಟೆ ತುಂಬಾ ಊಟ ಸಿಗುತ್ತಿದ್ದರಿಂದ ಜನ ಮುಗಿ ಬಿದ್ದು ಇಂದಿರಾ ಕ್ಯಾಂಟಿನ್ ಗಳಲ್ಲಿ ಊಟ ಮಾಡುತ್ತಿದ್ದರು,ಇನ್ನೂ ಕೆಲವೆಡೆ ಕ್ಯಾಂಟಿನ್ ಗಳು ಬಿಬಿಎಂಪಿ ಸಹಕಾರದೊಂದಿಗೆ ಅನೇಕ ಸಮಸ್ಯೆಗಳು ಇದ್ರು ಕೂಡ ಜನರ ಹೊಟ್ಟೆ ತುಂಬಿಸುವಲ್ಲಿ ಯಶಸ್ವಿಯಾಗಿದ್ದವು, ಇನ್ನು ಅಂತಹ ಕ್ಯಾಂಟಿನ್ಗಳು  ಈ ಬಾರಿ ಇನ್ನಷ್ಟೂ ಅಭಿವೃದ್ದಿ ಭಾಗ್ಯಯಿದೆ ಹಾಗಾಗೀ ಜನ ಈ ಬಾರಿ ಇಂದಿರಾ ಕ್ಯಾಂಟಿನ್ಗಳಲ್ಲಿ ಶುಚಿ ರುಚಿಯಾದ ಆಹಾರವನ್ನು ಸವಿಯಲು ಸಿದ್ದವಾಗಿದ್ದಾರೆ

 ಓಟ್ನಲಿ ಮುಚ್ಚಿರುವ ಇಂದಿರಾ ಕ್ಯಾಂಟಿನ್ ಗಳು  ಆದಷ್ಟೂ ಬೇಗ ತೆರೆದು ಬಡವರ ಪಾಲಿನ ಅಕ್ಷಯ ಪಾತ್ರೆ ಯಾಗಲಿ ಎಂಬುದು ರಾಜ್ ನ್ಯೂಸ್ ನ ಆಶಯ

Share this Story:

Follow Webdunia kannada

ಮುಂದಿನ ಸುದ್ದಿ

ಶುರುವಾಯ್ತು ಪಠ್ಯ ಪರಿಷ್ಕರಣೆ ಗುಮ್ಮ