Select Your Language

Notifications

webdunia
webdunia
webdunia
webdunia

ಮಗುವಿಗೆ ಮತ್ತೆ ಉಸಿರುಕೊಟ್ಟ ವೈದ್ಯರಿಗೊಂದು ಸಲಾಂ

ಮಗುವಿಗೆ ಮತ್ತೆ ಉಸಿರುಕೊಟ್ಟ ವೈದ್ಯರಿಗೊಂದು ಸಲಾಂ
bangalore , ಶುಕ್ರವಾರ, 24 ಫೆಬ್ರವರಿ 2023 (14:11 IST)
ಒಮ್ಮೆ ಹೃದಯ ಬಡಿತ ನಿಂತು ಹೋದರೆ ಬದುಕಿ ಬರುವ ಮಾತೆಲ್ಲಿ, ಆದರೆ ಈ ಮಗು ಸಾವನ್ನೂ ಗೆದ್ದು ಬಂದಿದೆ. ಸತತ 3 ಗಂಟೆಗಳ ಕಾಲ ಹೃದಯ ಬಡಿತ ನಿಂತಿದ್ದರೂ, ವೈದ್ಯರು ಮಗುವನ್ನು ಬದುಕಿಸುವಲ್ಲಿ ಸಫಲರಾಗಿದ್ದಾರೆ. ಇದು ವೈದ್ಯಲೋಕದ ಅಚ್ಚರಿ ಎಂದೇ ಹೇಳಬಹುದು. ಹೋಂ ಡೇ ಕೇರ್​ನ ಹೊರಾಂಗಣದಲ್ಲಿ ಆಡುತ್ತಿದ್ದ 20 ತಿಂಗಳ ಮಗು ಅರಿವಿಲ್ಲದೆ ಈಜುಕೊಳಕ್ಕೆ ಬಿದ್ದಿತ್ತು. ಪ್ರಜ್ಞೆ ತಪ್ಪಿತ್ತು, ಅಗ್ನಿಶಾಮಕ ಸಿಬ್ಬಂದಿ ಮಗುವನ್ನು ಆಸ್ಪತ್ರೆಗೆ ಕರೆತಂದಾಗ ಮಗು ನಿರ್ಜೀವವಾಗಿತ್ತು. ಈ ಘಟನೆ ನಡೆದಿದ್ದು, ಕೆನಡಾದಲ್ಲಿ. ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮಗುವಿನ ಹೃದಯ ಬಡಿತ ನಿಂತಿತ್ತು, ಆದರೂ ವೈದ್ಯರು ನೋಡಿಯೇ ಬಿಡೋಣ ಮಗು ಬದುಕಿದರೂ ಬದುಕಬಹುದು ಎಂದು ನಿರ್ಧಾರ ಮಾಡಿದರು. ಅಲ್ಲಿನ ಷಾರ್ಲೆಟ್ ಎಲೀನರ್ ಎಂಗಲ್ಹಾರ್ಟ್​ ಆಸ್ಪತ್ರೆ ವೈದ್ಯರು, ಸಿಬ್ಬಂದಿ ಮಗುವನ್ನು ಉಳಿಸಲು ನಿರಂತರ ಪ್ರಯತ್ನ ಮಾಡಿ ಕೊನೆಗೂ ಮಗು ಬದುಕುಳಿದಿದೆ. ಪೋಷಕರು ಮಗುವಿಗೆ ಮರುಜನ್ಮ ನೀಡಿದ ವೈದ್ಯರಿಗೆ ಧನ್ಯವಾದ ಅರ್ಪಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನ ರಸ್ತೆಗಳಿಗೆ ಏನಾಗಿದೆ..!