Select Your Language

Notifications

webdunia
webdunia
webdunia
webdunia

ಬೆಂಗಳೂರಿನ ರಸ್ತೆಗಳಿಗೆ ಏನಾಗಿದೆ..!

ಬೆಂಗಳೂರಿನ ರಸ್ತೆಗಳಿಗೆ ಏನಾಗಿದೆ..!
bangalore , ಶುಕ್ರವಾರ, 24 ಫೆಬ್ರವರಿ 2023 (14:05 IST)
ಕಳಪೆ ಕಾಮಗಾರಿಗಳಿಂದ ಮತ್ತೆ ಮತ್ತೆ ರಸ್ತೆಗಳು ಯಾವ ರೀತಿ ಇದೆ ಎಂಬುದು ಪ್ರೂವ್ ಆಗ್ತಿವೆ.ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ನಾಗಪುರ ಮುಖ್ಯ ರಸ್ತೆಯಲ್ಲಿ ರಸ್ತೆ ಕುಸಿದಿದೆ.ಕಳೆದ ೧೫-೨೦ ದಿನಗಳ ಹಿಂದೆ ರಸ್ತೆ ಕುಸಿದಿದೆ.ರಸ್ತೆ ಕುಸಿದ್ರೂ ಯಾವ್ದೇ ಬ್ಯಾರಿಕೇಡ್ ಅಳವಡಿಕೆಯಿಲ್ಲ. ಗುಂಡಿ ಮುಚ್ಚುವ ಕೆಲಸವೂ ಆಗಿಲ್ಲ.ಗುಂಡಿ ಕುಸಿದ ಜಾಗದ ಕೂಗಳತೆಯೇ ದೂರದಲ್ಲಿಯೇ  ಶಾಸಕರ ಕಛೇರಿ, ಬಿಬಿಎಂಪಿ ಕಛೇರಿ ಇದೆ.ಮಧ್ಯೆ ರಸ್ತೆಯಲ್ಲಿ ಹಂತ ಹಂತವಾಗಿ ಗುಂಡಿ ಕುಸಿಯುತ್ತಿದೆ.ಗುಂಡಿ ಕಾಣದೇ ಸಡನ್ ಆಗಿ ಗುಂಡಿಯಲ್ಲಿ  ಬೈಕ್ ಗಳು ಲಾಕ್ ಆಗಿದೆ.ಮಹಾಲಕ್ಷ್ಮಿ ಲೇಔಟ್ ನ, ನಾಗಪುರ ಮುಖ್ಯ ರಸ್ತೆಯಲ್ಲಿ ನಾಲ್ಕು ಅಡಿ ಆಳದ ಗುಂಡಿ ಕುಸಿದಿದೆ.ಗುಂಡಿಗೆ ಬಿದ್ರೆ ಜೀವಕ್ಕೆ ಕುತ್ತು ಗ್ಯಾರಂಟಿ.ಗುಂಡಿಯ ಬಳಿ ಸ್ಥಳೀಯರು ಬ್ಯಾರಿಕೇಡ್ ಹಾಕಿದಾರೆ.
 
ಗುಂಡಿಯಲ್ಲಿ ಬೈಕ್ ನ ಚಕ್ರಗಳು ಲಾಕ್ ಆಗ್ತಿದ್ದು, ಗುಂಡಿಗೆ ಬಿದ್ದು ,ಬೈಕ್ ಸವಾರರು ಸ್ಕಿಡ್ ಆಗಿದ್ದಾರೆ.ಸ್ಥಳೀಯರಿಂದ ಶಾಸಕರನ್ನ ತರಾಟೆ ತೆಗೆದುಕೊಳ್ಳಲಾಗಿದೆ.ಗುಂಡಿಗಿಳಿದು ಸ್ಥಳೀಯ ಶಾಸಕ ಗೋಪಾಲಯ್ಯರ ಮೇಲೆ ಜನರು ಆಕ್ರೋಶ ಹೊರಹಾಕಿದ್ದಾರೆ.ಗುಂಡಿಯ ಆಳವನ್ನು ತೋರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಶಾಸಕರ ಬಗ್ಗೆ ಸಮರ್ಥಿಸಿಕೊಳ್ಳಲು ಬಂದ  ಇಬ್ಬರು ಯುವಕರಿಗೆ ಸ್ಥಳೀಯರು ಕ್ಲಾಸ್  ತಗೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಂಡವಾಳ ವೆಚ್ಚಕ್ಕಾಗಿ ಸಾಲದ ಬಳಕೆ : ಬೊಮ್ಮಯಿ