Select Your Language

Notifications

webdunia
webdunia
webdunia
webdunia

ದಕ್ಷಿಣದಲ್ಲಿ ಶುರುವಾಯ್ತು ರವೀನಾ ಹವಾ..!

ದಕ್ಷಿಣದಲ್ಲಿ ಶುರುವಾಯ್ತು ರವೀನಾ ಹವಾ..!
bangalore , ಶುಕ್ರವಾರ, 29 ಏಪ್ರಿಲ್ 2022 (19:31 IST)
KGF ಚಿತ್ರದಲ್ಲಿ ನಟಿಸಿದ್ದೇ ನಟಿಸಿದ್ದು..ಬಾಲಿವುಡ್ ಬ್ಯೂಟಿ ರವೀನಾ ಟಂಡನ್ ಗೆ ಡಿಮ್ಯಾಂಡ್ ಜಾಸ್ತಿ ಆಗಿದೆ. ಸೌತ್ ಇಂಡಸ್ಟ್ರಿ ಸ್ಟಾರ್ ನಟರು, ನಿರ್ದೆಶಕರು ರವೀನಾ ಹಿಂದೆ ಬಿದ್ದಿದದಾರಂತೆ. ನಮ್ಮ ಚಿತ್ರಕ್ಕೆ ಅವರೇ ಬೇಕು, ಆ ಕ್ಯಾರೆಕ್ಟರ್ ಅವರೇ ಮಾಡ್ಬೇಕು ಅಂತ ಕಾಲ್ ಶೀಟ್ ಕೇಳ್ತಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ. ಇನ್ನು, KGF-2 ಸಿನಿಮಾದಲ್ಲಿ ರವೀನಾ ನಟನೆಗೆ ಫಿದಾ ಆಗಿರೋ ಗಬ್ಬರ್ ಸಿಂಗ್ ಖ್ಯಾತಿಯ ತೆಲುಗು ನಿರ್ದೇಶಕ ಹರಿ ಶಂಕರ್, ಪವನ್ ಕಲ್ಯಾಣ್ ಜೊತೆ ಮಾಡ್ತಿರೋ ಹೊಸ ಚಿತ್ರಕ್ಕಾಗಿ ರವೀನಾ ಅವರನ್ನ ಕರೆತರಲು ಪ್ರಯತ್ನಿಸುತ್ತಿದ್ದಾರಂತೆ..ಇನ್ನು, ತ್ರಿವಿಕ್ರಮ್ ಶ್ರೀನಿವಾಸ್ ಮತ್ತು ಪ್ರಿನ್ಸ್ ಮಹೇಶ್ ಬಾಬು ಕಾಂಬಿನೇಷನ್​​ನಲ್ಲಿ ಮೂಡಿ ಬರಲಿರೋ ಚಿತ್ರದಲ್ಲಿ ರವೀನಾ ಅವರಿಗೆ ಒಂದು ಪಾತ್ರ ಕ್ರಿಯೇಟ್ ಮಾಡಿ ಅಂತ ಪ್ರಿನ್ಸ್ ಅಭಿಮಾನಿಗಳು ಬೇಡಿಕೆ ಇಟ್ಟಿದ್ದಾರಂತೆ..ತ್ರಿವಿಕ್ರಮ್ ಸಿನಿಮಾದಲ್ಲಿ ಪವರ್​​ ಫುಲ್ ಫಿಮೇಲ್ ಕ್ಯಾರೆಕ್ಟರ್ ಇದ್ದೇ ಇರುತ್ತೆ..ಈ ಬಾರಿ ಆ ಪಾತ್ರವನ್ನ ರವೀನಾ ಅವರಿಂದ ಮಾಡಿಸಿದ್ರೆ ಚೆನ್ನಾಗಿರುತ್ತೆ ಅಂತ ಮಹೇಶ್ ಬಾಬು ಫ್ಯಾನ್ಸ್ ಡೈರೆಕ್ಟರ್​​ಗೆ ಸಲಹೆ ನೀಡ್ತಿದ್ದಾರೆ ಎನ್ನಲಾಗ್ತಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯುತ್ ಸ್ಪರ್ಶಿಸಿ 10 ಮಂದಿ ಸಾವು