Publish Date: Sat, 16 Apr 2022 (21:01 IST)
Updated Date: Sat, 16 Apr 2022 (21:04 IST)
'ರಾಕಿಂಗ್ ಸ್ಟಾರ್' ಯಶ್ ಅಭಿನಯದ 'ಕೆಜಿಎಫ್: ಚಾಪ್ಟರ್ 2' ಬಾಕ್ಸ್ ಆಫೀಸ್‌ನಲ್ಲಿ ಹಣದ ಹೊಳೆಯನ್ನೇ ಹರಿಸುತ್ತಿದೆ. 88 ವರ್ಷಗಳ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಈವರೆಗೂ ಕನ್ನಡದ ಯಾವ ಸಿನಿಮಾ ಮಾಡಿರದ ಸಾಧನೆಯನ್ನು 'KGF 2' ಮಾಡಿದೆ. ಅಷ್ಟೇ ಏಕೆ, ಹಿಂದಿ ಚಿತ್ರಗಳು ಸೇರಿದಂತೆ, 'ಬಾಹುಬಲಿ 2', 'RRR' ಸಿನಿಮಾ ಕೂಡ ಮಾಡಿರದಂತಹ ದೊಡ್ಡ ದಾಖಲೆಯೊಂದನ್ನು ಈ ಚಿತ್ರ ಮಾಡಿದೆ., KGF- 2 ಸಿನಿಮಾದ ಮೊದಲ ದಿನದ ಗಳಿಕೆಯ ವಿವರ ಬಹಿರಂಗವಾಗಿದೆ. ಮೊದಲ ದಿನವೇ ಭಾರತದ ಬಾಕ್ಸ್ ಆಫೀಸ್‌ನಲ್ಲಿ 134.50 ಕೋಟಿಗೂ ಹೆಚ್ಚು ಹಣ ಬಾಚಿಕೊಂಡಿದೆ. ಈ ಮೂಲಕ ಭಾರತೀಯ ಚಿತ್ರರಂಗದಲ್ಲಿ ಕೆಜಿಎಫ್-2 ಹೊಸ ಇತಿಹಾಸ ನಿರ್ಮಿಸಿದೆ.