Publish Date: Sat, 16 Apr 2022 (20:58 IST)
Updated Date: Sat, 16 Apr 2022 (21:01 IST)
ಹಾಸ್ಯ ನಟರಾಗಿ ಹತ್ತಾರು ಚಿತ್ರಗಳಲ್ಲಿ ನಟಿಸಿರುವ ತರಂಗ ವಿಶ್ವ ಈಗ ಹೀರೋ ಆಗಿದ್ದಾರೆ. ವಿಲೋಕ್ ಮತ್ತೊಬ್ಬ ನಾಯಕ. ಚಿತ್ರದ ಹೆಸರು ಗಿರ್ಕಿ. ಇತ್ತೀಚೆಗಷ್ಟೆ ಈ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ನಟ ಶರಣ್ ಮುಖ್ಯ ಅತಿಥಿಯಾಗಿ ಆಗಮಿಸಿ ಟೀಸರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು..ಚಿತ್ರತಂಡದ ಪರಿಶ್ರಮ ಟೀಸರ್ ನಲ್ಲಿ ಎದ್ದು ಕಾಣುತ್ತಿದೆ, ಒಳ್ಳೆಯದಾಗಲಿ ಎಂದು ಶರಣ್ ಹಾರೈಸಿದರು.