Select Your Language

Notifications

webdunia
webdunia
webdunia
webdunia

ರಷ್ಯಾದಿಂದ ಭಾರತಕ್ಕೆ ‘S-400’ ಆಗಮನ!

ರಷ್ಯಾದಿಂದ ಭಾರತಕ್ಕೆ ‘S-400’ ಆಗಮನ!
bangalore , ಶನಿವಾರ, 16 ಏಪ್ರಿಲ್ 2022 (20:33 IST)
ಉಕ್ರೇನ್‌ನೊಂದಿಗಿನ ಯುದ್ಧದ ಹೊರತಾಗಿಯೂ, ಭಾರತಕ್ಕೆ 2ನೇ ಎಸ್‌-400 ವಾಯುರಕ್ಷಣಾ ವ್ಯವಸ್ಥೆಯನ್ನು ಪೂರೈಸುವ ಪ್ರಕ್ರಿಯೆಯನ್ನು ರಷ್ಯಾ ಆರಂಭಿಸಿದೆ. ಮಾಸಾಂತ್ಯದ ವೇಳೆಗೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಮೂಲಗಳ ಪ್ರಕಾರ ತಿಳಿದಿದ್ದು, ಇದರೊಂದಿಗೆ ಶೀಘ್ರವೇ ಭಾರತದ ವಾಯರಕ್ಷಣಾ ವ್ಯವಸ್ಥೆ ಮತ್ತಷ್ಟು ಬಲಗೊಳ್ಳಲಿದೆ..‘ಎಸ್‌-400 ಟ್ರಯಂಫ್‌’ ರಷ್ಯಾ ಅಭಿವೃದ್ಧಿಪಡಿಸಿರುವ ವಿಶ್ವದ ಅತ್ಯಾಧುನಿಕ ವಾಯುರಕ್ಷಣಾ ವ್ಯವಸ್ಥೆಯಾಗಿದೆ. ಇದರಲ್ಲಿನ ರಾಡರ್‌ಗಳು, ಶತ್ರು ದೇಶ ನಡೆಸುವ ದಾಳಿಯನ್ನು 1000 ಕಿ.ಮೀ. ದೂರದಲ್ಲೇ ಪತ್ತೆ ಹಚ್ಚಿ ಅದನ್ನು ಸಮರ್ಥವಾಗಿ ಹೊಡೆದುರುಳಿಸಬಲ್ಲದು. ಜೊತೆಗೆ ಒಂದೇ ಬಾರಿಗೆ 30ಕ್ಕೂ ಹೆಚ್ಚು ದಾಳಿ ನಡೆದರೂ ಅದನ್ನು ಪತ್ತೆ ಹಚ್ಚಿ, ಪ್ರತಿದಾಳಿ ನಡೆಸುವ ಸಾಮರ್ಥ್ಯ ಇದಕ್ಕಿದೆ..ಈ ವ್ಯವಸ್ಥೆಗಳನ್ನು ಪಾಕಿಸ್ತಾನ, ಚೀನಾ ಗಡಿ & ದೇಶದ ಇತರೆ ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಲು ಸೇನೆ ಉದ್ದೇಶಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಂಜನೇಯ ದೇಗುಲಕ್ಕೆ ಹೆಚ್ಡಿಕೆ ಭೇಟಿ