Select Your Language

Notifications

webdunia
webdunia
webdunia
webdunia

ರಷ್ಯಾದಿಂದ ಭಾರತಕ್ಕೆ ಬಂತು ಕ್ಷಿಪಣಿ

ರಷ್ಯಾದಿಂದ ಭಾರತಕ್ಕೆ  ಬಂತು ಕ್ಷಿಪಣಿ
ನವದೆಹಲಿ , ಭಾನುವಾರ, 17 ಏಪ್ರಿಲ್ 2022 (12:43 IST)
ನವದೆಹಲಿ : ರಷ್ಯಾ-ಉಕ್ರೇನ್ ಯುದ್ಧದ ನಡುವೆಯೂ ರಷ್ಯಾ ಭಾರತಕ್ಕೆ ಮಿಲಿಟರಿ ಸರಬರಾಜು ನೀಡುವುದನ್ನು ಮುಂದುವರಿಸಿದೆ.

ಈಗಾಗಲೇ ಭಾರತ ಮಾಸ್ಕೋದಿಂದ ಎಸ್-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಸ್ವೀಕರಿಸಿದೆ ಎಂದು ವರದಿಯಾಗಿದೆ.

ಯುದ್ಧದ ನಡುವೆಯೂ ರಷ್ಯಾ ಭಾರತಕ್ಕೆ ಮಿಲಿಟರಿ ಸರಬರಾಜುಗಳನ್ನು ಕಳುಹಿಸುತ್ತಿದೆ. ಇಲ್ಲಿವರೆಗೆ ರಷ್ಯಾ ಯಾವುದೇ ವಸ್ತುಗಳ ರವಾನೆಯಲ್ಲಿ ವಿಳಂಬ ಮಾಡಿಲ್ಲ.

ಎಸ್-400 ಕ್ಷಿಪಣಿ ವ್ಯವಸ್ಥೆಯನ್ನು ಹಡಗಿನ ಮೂಲಕ ಭಾರತಕ್ಕೆ ಕಳುಹಿಸಿದೆ. ಕ್ಷಿಪಣಿ ವ್ಯವಸ್ಥೆಯ ಇತರ ಭಾಗಗಳು ವಿಮಾನ ಹಾಗೂ ಸಮುದ್ರ ಮಾರ್ಗಗಳ ಮೂಲಕ ಆಗಮಿಸಿವೆ ಎಂದು ಮೂಲಗಳು ತಿಳಿಸಿವೆ. 

ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾಗಿ 45 ದಿನಗಳು ಕಳೆದಿವೆ. ಈ ಹಿನ್ನೆಲೆಯಲ್ಲಿ ರಷ್ಯಾದಿಂದ ಖರೀದಿ ಮಾಡಿದ್ದ ಸರಬರಾಜುಗಳನ್ನು ಭಾರತ ಸ್ವೀಕರಿಸಲು ಕಷ್ಟವಾಗಬಹುದು ಎಂಬ ಆತಂಕ ವ್ಯಕ್ತಪಡಿಸಿತ್ತು. ಆದರೂ ಭಾರತ ಇದೀಗ ರಷ್ಯಾದಿಂದ ಮಿಲಿಟರಿ ವಸ್ತುಗಳನ್ನು ಯಾವುದೇ ಸಮಸ್ಯೆಗಳಿಲ್ಲದೇ ಸ್ವೀಕರಿಸಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಏಕಾಏಕಿ ಕಟ್ಟುನಿಟ್ಟಿನ ಲಾಕ್‌ಡೌನ್‌!