Select Your Language

Notifications

webdunia
webdunia
webdunia
webdunia

ಹಿಂದಿಯಲ್ಲೇ 200 ಕೋಟಿ; ತಮಿಳುನಾಡಿನಲ್ಲಿ ಬೀಸ್ಟ್ ಬೇಟೆಯಾಡಿದ ಕೆಜಿಎಫ್-2!

kgf-2 yash hinmdi ಹಿಂದಿ ಕೆಜಿಎಫ್ ಯಶ್

ಭಾರತೀಯ ಚಿತ್ರರಂಗದಲ್ಲಿ ದಾಖಲೆಗಳನ್ನು ಪುಡಿಗಟ್ಟುತ್ತಿರುವ ಕೆಜಿಎಫ್-2 ಹಿಂದಿ ಭಾಷೆಯೊಂದರಲ್ಲೇ 200 ಕೋಟಿ ರೂ. ಸಂಗ್ರಹಿಸುವ ಮೂಲಕ ಹೊಸ ದಾಖಲೆ ಬರೆದಿದೆ.

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಚಿತ್ರ ಬಿಡುಗಡೆ ಆದ 5 ದಿನದಲ್ಲೇ 200 ಕೋಟಿ ರೂ. ಬಾಚಿದೆ. ಈ ಮೂಲಕ ಅತ್ಯಂತ ವೇಗವಾಗಿ 200 ಕೋಟಿ ಕ್ಲಬ್ ಸೇರಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದೇ ವೇಳೆ ಕೆಜಿಎಫ್ ಜೊತೆ ಪೈಪೋಟಿಗೆ ಇಳಿದಿದ್ದ ವಿಜಯ್ ನಟಿಸಿದ್ದ ಬೀಸ್ಟ್ ಚಿತ್ರವನ್ನು ಕೆಜಿಎಫ್-2 ತಮಿಳುನಾಡಿನಲ್ಲೇ ಹಿಂದಿಕ್ಕಿದೆ. ಒಂದು ದಿನ ಮುಂಚಿತವಾಗಿ ಬಿಡುಗಡೆ ಆದ ಬೀಸ್ಟ್ ತಮಿಳುನಾಡಿನಲ್ಲಿಯೇ 100 ಕೋಟಿ ಕ್ಲಬ್ ಸೇರಿದೆ. ಆದರೆ ಕೆಜಿಎಫ್-2 ಈ ದಾಖಲೆಯನ್ನು ಮುರಿದಿದ್ದು, ಸೋಮವಾರ ದಿನದ ಗಳಿಕೆಯಲ್ಲಿ ಶೇ.50ರಷ್ಟು ಹೆಚ್ಚು ಗಳಿಸಿ ಹೊಸ ದಾಖಲೆ ಬರೆದಿದೆ.

ವೀಕೆಂಡ್ ಮುಗಿದ ನಂತರ ಸೋಮವಾರವೂ ಕೆಜಿಎಫ್ ನಾಗಾಲೋಟ ಮುಂದುವರಿದಿದೆ. ಈ ಮೂಲಕ ಅತ್ಯಂತ ಕಡಿಮೆ ಅವಧಿಯಲ್ಲಿ 200 ಕೋಟಿ ಬಾಚಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸೋಮವಾರ ಇಳಿಕೆ ಕಂಡು ಬಂದರೂ ಬಹುತೇಕ ಥಿಯೇಟರ್ ಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಚಿತ್ರ ಒಟ್ಟಾರೆಯಾಗಿ ಗಳಿಕೆ 600 ಕೋಟಿ ರೂ. ಗಡಿ ದಾಟಿದೆ ಎಂದು ಹೇಳಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಪ್ಯಾನ್ ಇಂಡಿಯಾ ಸಿನಿಮಾಗಳ ಎದುರು ಬಾಲಿವುಡ್ ಸೋಲುತ್ತಿರುವುದಕ್ಕೆ ಕಾರಣ ವಿವರಿಸಿದ ಸಂಜಯ್ ದತ್