Select Your Language

Notifications

webdunia
webdunia
webdunia
webdunia

ಕ್ಯೂಆರ್ ಕೋಡ್ ಮೂಲಕ ಸಿಬ್ಬಂದಿ ಕಾರ್ಯ ವೈಖರಿಗೆ ರೇಟಿಂಗ್

ಕ್ಯೂಆರ್ ಕೋಡ್ ಮೂಲಕ ಸಿಬ್ಬಂದಿ ಕಾರ್ಯ ವೈಖರಿಗೆ ರೇಟಿಂಗ್
bangalore , ಭಾನುವಾರ, 25 ಡಿಸೆಂಬರ್ 2022 (20:10 IST)
ಸದಾ ಕೆಲಸ ಕೆಲಸ ಅನ್ನೋ ಪೊಲೀಸ್ರು ಕೂಲಾಗಿ ಕೂರ್ಗ್​ನಲ್ಲಿ ಕಾಲ ಕಳೆಯುತ್ತಿದ್ದಾರೆ. ಎಸಿ ಥಿಯೇಟರ್​ನಲ್ಲಿ ಕಾಂತಾರಾ ಸಿನಿಮಾ ನೋಡಿದ್ದಾರೆ. 5​ ಸ್ಟಾರ್​ ಹೋಟೆಲ್​ನಲ್ಲಿ ಕುಟುಂಬದ ಜತೆ ಡಿನ್ನರ್​ ಎಂಜಾಯ್​ ಮಾಡ್ತಿದ್ದಾರೆ.ಹೌದು,ಇದೇನಪ್ಪಾ ಪೊಲೀಸ್ರಿಗೆ ಇಂಥಾ ಬಂಪರ್​ ಆಫರ್​ ಅಂತೀರಾ. ಇದೆಲ್ಲ ಸುಮ್ನೆ ಸಿಗೋಲ್ಲ ಸ್ವಾಮಿ ಅದಕ್ಕೂ ಈ ಪೊಲೀಸ್ರು ಕೆಲಸ ಮಾಡಿ ಭೇಷ್​ ಅನಿಸಿಕೊಳ್ಳಬೇಕು.
ಪೊಲೀಸರನ್ನು ಹೆಚ್ಚು ಜನಸ್ನೇಹಿಯನ್ನಾಗಿ ಮಾಡಲು ಆಗ್ನೇಯ ವಿಭಾಗದಲ್ಲಿ ಇತ್ತೀಚಿಗೆ ಫೀಡ್​ ಬ್ಯಾಕ್​ ಕ್ಯೂಆರ್ ಕೋಡ್ ಕಾನ್ಸೆಪ್ಟ್ ಪರಿಚಯಿಸಲಾಗಿತ್ತು. ಸಮಸ್ಯೆಗಳನ್ನ ಹೊತ್ತು ಠಾಣೆಗೆ ಬರುವ ಜನರ ಜೊತೆ ಪೊಲೀಸ್​ ಸಿಬ್ಬಂದಿ ನಯವಾಗಿ ವರ್ತಿಸಿ, ಅವರ ಸಮಸ್ಯೆ ಆಲಿಸಿ ಪರಿಹಾರ ಕೊಡುವ ನಿಟ್ಟಿನಲ್ಲಿ ಹೇಗೆ ಕೆಲಸ ಮಾಡ್ತಾರೆ ಅನ್ನೋದನ್ನ ತಿಳಿಯೋಕೆ ಪ್ರಾಯೋಗಿಕವಾಗಿ ಈ ವ್ಯವಸ್ಥೆಯನ್ನ ಜಾರಿಗೆ ತರಲಾಗಿದೆ. ಠಾಣೆಗೆ ಬರುವ ಜನರು ಸಿಬ್ಬಂದಿಯ ವರ್ತನೆ ಹಾಗೂ ಕಾರ್ಯವೈಕರಿ ಬಗ್ಗೆ ಕ್ಯೂ ಆರ್​ ಕೋಡ್​ ಸ್ಕ್ಯಾನ್​ ಮಾಡುವ ಮೂಲಕ ತಮ್ಮ ನಡೆಸಿ ಬ್ಯಾಕ್​ ಕೊಡುತ್ತಿದ್ದಾರೆ. ಇದರಲ್ಲಿ ಪೊಲೀಸ್ರ ಬಗ್ಗೆ ಒಳ್ಳೆಯ ಹಾಗೂ ಕೆಟ್ಟ ವಿಚಾರಗಳಿದ್ದರೂ ಇಲ್ಲಿ ಹಂಚಿಕೊಳ್ಳಬಹುದಾಗಿದೆ. ಹೀಗಾಗಿಯೇ ಈ ಕಾನ್ಸೆಪ್ಟ್​ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಆಗ್ನೇಯ ವಿಭಾಗದಲ್ಲಿರುವ ಪೊಲೀಸ್​ ಠಾಣೆಗಳಲ್ಲಿ  ಕ್ಯೂಆರ್​ ಕೋಡ್​ ಸ್ಕ್ಯಾನರ್​ ಇಡಲಾಗಿದ್ದು, ಠಾಣೆಗೆ ಬರುವ ಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಕೋಡ್​ ಮೂಲಕ ಪೊಲೀಸ್​ ಸಿಬ್ಬಂದಿಯ ಹೆಸರು ಹಾಕಿ ಅವರ ಕಾರ್ಯವೈಕರಿ ಹಾಗೂ ವರ್ತನೆ ಬಗ್ಗೆ ಸಿಂಗಲ್​ ಸ್ಟಾರ್​ನಿಂದ 5 ಸ್ಟಾರ್​ವರೆಗೆ ರೇಟಿಂಗ್​ ಕೊಡ್ತಿದ್ದಾರೆ. ಸದ್ಯಕ್ಕೆ ಬಂದಿರುವ ಫೀಡ್​ ಬ್ಯಾಕ್​ನಲ್ಲಿ ಪೊಲೀಸರ ವರ್ತನೆಯಲ್ಲಿ ತುಂಬಾ ಬದಲಾವಣೆ ಆಗಿರೋ ವಿಷಯ ಬೆಳಕಿಗೆ ಬಂದಿದೆ. ಹೀಗಾಗಿ ಸಾರ್ವಜನಿಕರು ಪೊಲೀಸ್ರ ವರ್ತನೆ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಸಿಲಿಕಾನ್ ಸಿಟಿಯ ಆಗ್ನೇಯ ವಿಭಾಗ ಪೊಲೀಸರಲ್ಲಿ ಉತ್ತಮ ಕೆಲಸ ಮಾಡಿ ಸೈ ಅನ್ನಿಸಿಕೊಂಡ ಸಿಬ್ಬಂದಿಗೆ ಬಂಪರ್​ ಆಫರ್​ ಸಿಕ್ಕಿದೆ. ಫೀಡ್​ಬ್ಯಾಕ್​ ಕ್ಯೂಆರ್​ ಕೋಡ್​ ವ್ಯವಸ್ಥೆಯಲ್ಲಿ ಅತಿ ಹೆಚ್ಚು ಜನರ ಮೆಚ್ಚುಗೆ ಪಡೆದ 9 ಸಿಬ್ಬಂದಿಗೆ ಬಂಪರ್​ ಆಫರ್​ನ ಕೂಪನ್​ಗಳು ಸಿಕ್ಕಿವೆ. ಮೂವರು ಸಿಬ್ಬಂದಿಗೆ ಕೂರ್ಗ್ ರೆಸಾರ್ಟ್ ನಲ್ಲಿ ಕಾಲ‌ ಕಳೆಯಲು ಅವಕಾಶ ಸಿಕ್ರೆ, ಇನ್ನೂ ಮೂವರು ಸಿಬ್ಬಂದಿಗೆ ತಲಾ 5 ರಂತೆ ಕಾಂತಾರ ಸಿನಿಮಾ ಟಿಕೆಟ್​ಗಳನ್ನ ಕೊಡಲಾಗಿದೆ.ಮತ್ತೆ ಮೂರು ಸಿಬ್ಬಂದಿಯ ಕುಟುಂಬಕ್ಕೆ ಡಿನ್ನರ್ ಪಾರ್ಟಿಗೆ ಕೂಪನ್ ನೀಡಲಾಗಿದೆ. ಪೊಲೀಸರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಕೆಲವು ಕಂಪನಿಗಳು ಸಿಬ್ಬಂದಿಯ ಬೆನ್ನಿಗೆ ನಿಂತರೆ, ಕೆಲವು ಕಂಪನಿ, ಹೋಟೆಲ್ ಗಳ ಉಚಿತ ಕೂಪನ್ ನೀಡಿ ಪ್ರೋತ್ಸಾಹಿಸಿದ್ರೆ, ಮತ್ತೆ ಕೆಲವು ಸಂಸ್ಥೆಗಳು ಖುದ್ದು ತಾವೇ ಪೊಲೀಸರಿಗೆ ಗಿಫ್ಟ್ ಹಾಗೂ ಕೂಪನ್ ನೀಡಿ ಸಿಬ್ಬಂದಿಯ ಕಾರ್ಯಕ್ಕೆ  ಪ್ರಶಂಸೆ ವ್ಯಕ್ತಪಡಿಸಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ನಾಡಿನೆಲ್ಲೆಡೆ ಬಲು ಜೋರಾಗಿ ಇದೆ ಕ್ರಿಸ್ಮಸ್ ಸಂಭ್ರಮ