Select Your Language

Notifications

webdunia
webdunia
webdunia
webdunia

ಪತ್ರಿಕಾಗೋಷ್ಠಿ ನಡೆಸುತ್ತಿರುವಾಗಲೇ ಕಾಂಗ್ರೆಸ್ ಶಾಸಕನ ಕೈಗೆ ಕೊಳ ಹಾಕಿದ ಪೊಲೀಸರು

Rape Case, Uttar Pradesh Congress MP Rakesh Rathore arrested,  Rape Case Against MP Rakesh Rathore

Sampriya

ಅಲಹಾಬಾದ್‌ , ಗುರುವಾರ, 30 ಜನವರಿ 2025 (15:46 IST)
Photo Courtesy X
ಅಲಹಾಬಾದ್‌: ಅತ್ಯಾಚಾರ ಪ್ರಕರಣದಲ್ಲಿ ಕಾಂಗ್ರೆಸ್‌ ಸಂಸದ ರಾಕೇಶ್‌ ರಾಥೋಡ್ ಅವರನ್ನು ಸೀತಾಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ.   

ಅಲಹಾಬಾದ್ ಹೈಕೋರ್ಟ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಒಂದು ದಿನದ ನಂತರ ಗುರುವಾರ  ಅತ್ಯಾಚಾರ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದ ರಾಕೇಶ್ ರಾಥೋಡ್ ಅವರನ್ನು ಸೀತಾಪುರದ ಅವರ ನಿವಾಸದಿಂದ ಬಂಧಿಸಲಾಯಿತು.

ಕೊತ್ವಾಲಿ ನಗರ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಳ್ಳಲು ಅವರ ನಿವಾಸಕ್ಕೆ ಆಗಮಿಸಿದಾಗ ರಾಥೋಡ್ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಮದುವೆಯಾಗುವುದಾಗಿ ನಂಬಿಸಿ ಕಳೆದ ನಾಲ್ಕು ವರ್ಷದಿಂದ ನಿರಂತರ ಅತ್ಯಾಚಾರ ಎಸಗಿರುವುದಾಗಿ ಜನವರಿ 17 ರಂದು ರಾಥೋಡ್ ವಿರುದ್ಧ ಮಹಿಳೆಯೊಬ್ಬರು ದೂರು ದಾಖಲಿಸಿದ್ದರು. ಎಫ್‌ಐಆರ್ ಆಧಾರದ ಮೇಲೆ ಇದೀಯ ಶಾಸಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣಾ ಆಯೋಗಕ್ಕೆ ಮೂರು ಬಾಟಲಿ ಕಳುಹಿಸುತ್ತೇನೆ: ಅರವಿಂದ್ ಕೇಜ್ರಿವಾಲ್