Select Your Language

Notifications

webdunia
webdunia
webdunia
webdunia

ಮದುವೆಯ ನೆಪವೊಡ್ಡಿ ಅತ್ಯಾಚಾರ: ಕಾಂಗ್ರೆಸ್ ಸಂಸದನ ವಿರುದ್ಧ ಪ್ರಕರಣ ದಾಖಲು

Rape Case, Sitapur MP Rakesh Rathore, Sitapure MP Controversy

Sampriya

ಸೀತಾಪುರ , ಶನಿವಾರ, 18 ಜನವರಿ 2025 (20:11 IST)
ಸೀತಾಪುರ: ಮದುವೆಯ ನೆಪವೊಡ್ಡಿ ತನ್ನ ಮೇಲೆ ಸೀತಾಪುರದ ಕಾಂಗ್ರೆಸ್ ಸಂಸದರೊಬ್ಬರು ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ಠಾಣೆ ಮೆಟ್ಟಿಲೇರಿದ್ದಾರೆ.

ಬಿಜೆಪಿ ವಿರುದ್ಧ ಬಂಡಾಯವೆದ್ದು ಕಾಂಗ್ರೆಸ್ ಸೇರಿದ ರಾಕೇಶ್‌ ರಾಥೋರ್‌ ಅವರ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಪ್ರಕರಣ ದಾಖಲು ಮಾಡಿದ್ದಾರೆ.

ನಗರದ ಬುಟ್ಸ್‌ಗಂಜ್ ಪ್ರದೇಶದ ನಿವಾಸಿಯಾಗಿರುವ ಮಹಿಳೆ ಜನವರಿ 15 ರಂದು ರಾಥೋಡ್ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಚಕ್ರೇಶ್ ಮಿಶ್ರಾ ಹೇಳಿದ್ದಾರೆ.

ದೂರಿನ ಆಧಾರದ ಮೇಲೆ ಕೊತ್ವಾಲಿ ನಗರ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿಕೊಂಡು ದೂರುದಾರರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.

2020ರಲ್ಲಿ ಬಿಜೆಪಿ ಶಾಸಕರಾಗಿದ್ದಾಗ ರಾಥೋರ್‌ ಅವರನ್ನು ಭೇಟಿಯಾಗಿದ್ದಾಗಿ ಮಹಿಳೆ ತನ್ನ ದೂರಿನಲ್ಲಿ ಆರೋಪಿಸಿದ್ದಾಳೆ ಎಂದು ಎಸ್ಪಿ ತಿಳಿಸಿದ್ದಾರೆ. ಇದಾದ ನಂತರ ರಾಥೋಡ್ ಆಕೆಗೆ ಹತ್ತಿರವಾದ. ರಾಥೋರ್‌ ಅವರೊಂದಿಗೆ ಪರಿಚಯವಾದ ನಂತರ, ಸೀತಾಪುರದ ತೈಲಿಕ್ ಮಹಾಸಂಘದ ಮಹಿಳಾ ಜಿಲ್ಲಾಧ್ಯಕ್ಷರನ್ನಾಗಿ ಮಾಡಲಾಯಿತು ಎಂದು ಮಹಿಳೆ ಹೇಳಿದರು. ಇದಾದ ನಂತರ, ರಾಥೋರ್‌ 2020 ರ ಮಾರ್ಚ್‌ನಲ್ಲಿ ಮಹಿಳೆಯನ್ನು ತನ್ನ ಮನೆಗೆ ಕರೆದು ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸಂತ್ರಸ್ತೆ ಘಟನೆಯನ್ನು ಯಾರಿಗಾದರೂ ಬಹಿರಂಗಪಡಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ರಾಥೋರ್‌ ತನ್ನನ್ನು ದೈಹಿಕವಾಗಿ ಶೋಷಣೆ ಮಾಡುತ್ತಲೇ ಇದ್ದಾನೆ ಎಂದು ದೂರುದಾರರು ಹೇಳಿದ್ದಾರೆ. ಸಂಸದರಾದ ನಂತರ ರಾಥೋಡ್ ಮಹಿಳೆಗೆ ಮಾನಹಾನಿ ಮಾಡುವುದಾಗಿ ಬೆದರಿಕೆ ಹಾಕುವ ಮೂಲಕ ಕಿರುಕುಳ ನೀಡಲಾರಂಭಿಸಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಮಹಿಳೆ ಮಿಶ್ರಾ ಅವರಿಗೆ ಲಿಖಿತ ದೂರು ದಾಖಲಿಸಿದ್ದಾರೆ ಮತ್ತು ಸಾಕ್ಷ್ಯವನ್ನು ಸಹ ಒದಗಿಸಿದ್ದಾರೆ ಮತ್ತು ಸಂಸದರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೆಟ್ರೋ ಪ್ರಯಾಣ ದರ ಏರಿಕೆ ವಿಚಾರ: ಸಿದ್ದರಾಮಯ್ಯರನ್ನು ಹೈಕ್ ರಾಮಯ್ಯ ಎಂದ ಬಿಜೆಪಿ