Select Your Language

Notifications

webdunia
webdunia
webdunia
Wednesday, 26 February 2025
webdunia

ಆರ್‌.ಜಿ.ಕರ್‌ ಪ್ರಕರಣ: ಸಂಜಯ್‌ಗೆ ಗಲ್ಲುಶಿಕ್ಷೆ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಸಿಬಿಐ

ಆರ್‌.ಜಿ.ಕರ್‌ ಪ್ರಕರಣ: ಸಂಜಯ್‌ಗೆ ಗಲ್ಲುಶಿಕ್ಷೆ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ  ಸಿಬಿಐ

Sampriya

ಕೋಲ್ಕತ್ತಾ , ಶುಕ್ರವಾರ, 24 ಜನವರಿ 2025 (14:27 IST)
Photo Courtesy X
ಕೋಲ್ಕತ್ತಾ: ಆರ್.ಜಿ ಕರ್ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಅಜೀವ ಶಿಕ್ಷೆಗೆ ಗುರಿಯಾಗಿರುವ ಸಂಜಯ್ ರಾಯ್‌ಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಕೋರಿ ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ನ್ಯಾಯಮೂರ್ತಿಗಳಾದ ದೇಬಾಂಗ್ಶು ಬಸಕ್‌ ಹಾಗೂ ಮೊಹಮ್ಮದ್ ಶಬ್ಬರ್ ರಶಿದಿ ಅವರಿದ್ದ ವಿಭಾಗೀಯ ಪೀಠದ ಅರ್ಜಿಯ ವಿಚಾರಣೆಯನ್ನು ಜ. 27ಕ್ಕೆ ನಿಗದಿಪಡಿಸಿತ್ತು. ಪಶ್ಚಿಮ ಬಂಗಾಳ ಸರ್ಕಾರವೂ ಇಂಥಹದ್ದೇ ಮನವಿ ಸಲ್ಲಿಸಿದ್ದು, ಒಟ್ಟಿಗೆ ವಿಚಾರಣೆ ನಡೆಸುವುದಾಗಿ ಪೀಠ ಹೇಳಿದೆ.

ಸಿಬಿಐ ಪರ ಹಾಜರಿದ್ದ ಡೆಪ್ಯುಟಿ ಸಾಲಿಸಿಟರ್ ಜನರಲ್ ರಾಜ್‌ದೀಪ್ ಮಜುಂದಾರ್, ಪ್ರಕರಣದ ತನಿಖೆ ನಡೆಸಿದ ‌ನಮಗೆ, ವಿಧಿಸಿದ ಶಿಕ್ಷೆಯ ಅಸಮರ್ಪಕತೆಯ ಆಧಾರದ ಮೇಲೆ ಕೆಳ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವ ಹಕ್ಕಿದೆ ಎಂದು ಪ್ರತಿಪಾದಿಸಿದರು.

ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಂಜಯ್ ರಾಯ್‌ಗೆ ಜೀವನ ಪರ್ಯಂತ ಜೈಲು ಶಿಕ್ಷೆ ವಿಧಿಸಿ ಸಿಯಾಲ್ದಾ ನ್ಯಾಯಾಲಯ ಜನವರಿ 20 ರಂದು ತೀರ್ಪು ನೀಡಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈನ ರೈಲು ದುರಂತಕ್ಕೆ ಟೀ ಮಾರುವವನ ಯಡವಟ್ಟೇ ಕಾರಣ: ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದ್ದೇನು