Publish Date: Thu, 29 Apr 2021 (10:08 IST)
Updated Date: Thu, 29 Apr 2021 (10:10 IST)
ಬೆಂಗಳೂರು: ಕೊರೋನಾದಿಂದಾಗಿ ದೇಶದಲ್ಲಿ ಇಷ್ಟು ಪ್ರಮಾಣದಲ್ಲಿ ಜನ ಸಾಯಲು ಮೋದಿ ಸರ್ಕಾರವೇ ಕಾರಣ ಎಂದು ನಟಿ, ಕಾಂಗ್ರೆಸ್ ನಾಯಕಿ ರಮ್ಯಾ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮೋದಿ ಸರ್ಕಾರದ ವಿರುದ್ಧ ಟೀಕೆ ಮಾಡಿರುವ ರಮ್ಯಾ, ಇಷ್ಟೊಂದು ಪ್ರಮಾಣದಲ್ಲಿ ಜನ ಕೊರೋನಾ ಸೋಂಕಿತರಾಗುವುದು ಮತ್ತು ಸಾವನ್ನು ತಪ್ಪಿಸಬಹುದಿತ್ತು. ಆದರೆ ಮೋದಿ ಸರ್ಕಾರದ ಅಸಡ್ಡೆ ಮತ್ತು ದುರಹಂಕಾರದಿಂದಾಗಿ ಜನ ಸಾಯುತ್ತಿದ್ದಾರೆ.
ಅಧಿಕಾರದ ವ್ಯಾಮೋಹದಲ್ಲಿರುವ ಸರ್ಕಾರ, ಜನರ ಅಳಲಿಗೆ ಕಿವಿಯೇ ಕೊಡದ ಸರ್ಕಾರದಿಂದ ಈ ಪರಿಸ್ಥಿತಿಗೆ ಬಂದಿದ್ದೇವೆ. ಇದನ್ನು ಕ್ಷಮಿಸಲಾಗದು ಎಂದು ರಮ್ಯಾ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.