ಬೆಂಗಳೂರು: ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ಸರ್ಕಾರ ಹೊಸ ನಿರ್ಬಂಧ ಹೇರಿದೆ.
ಇನ್ನು ಮುಂದೆ ಅಂತ್ಯ ಸಂಸ್ಕಾರದಲ್ಲಿ ಕೇವಲ ಐದು ಮಂದಿಗಷ್ಟೇ ಪಾಲ್ಗೊಳ್ಳಲು ಅವಕಾಶ ಎಂದಿದೆ. ಇದಕ್ಕೂ ಮೊದಲು ಕರ್ಫ್ಯೂ ಜಾರಿಗೆ ತಂದಿದ್ದಾಗ 20 ಮಂದಿಗೆ ಅವಕಾಶವಿತ್ತು.
ಆದರೆ ಇನ್ನು ಮುಂದೆ ಸಾಮಾನ್ಯ ರೋಗದಿಂದ ಮೃತಪಟ್ಟರೂ ಅಂತ್ಯ ಸಂಸ್ಕಾರದಲ್ಲಿ ಐದು ಮಂದಿ ಮಾತ್ರ ಭಾಗವಹಿಸಬಹುದಾಗಿದೆ. ಈ ಬಗ್ಗೆ ಕಂದಾಯ ಇಲಾಖೆ ಹೊಸ ನಿಯಮ ಜಾರಿ ಮಾಡಿ ಆದೇಶ ಹೊರಡಿಸಿದೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!