Select Your Language

Notifications

webdunia
webdunia
webdunia
webdunia

ಮಧ್ಯ ರಾತ್ರಿ ನಶೆಯಲ್ಲಿದ್ದ ಯುವತಿಯರ ರಂಪಾಟ..!

Rampage of young women who were drunk in the middle of the night
bangalore , ಸೋಮವಾರ, 10 ಜುಲೈ 2023 (20:00 IST)
ಮಧ್ಯ ರಾತ್ರಿಯ ಸಮಯ.ಡಿವೈಡರ್ ಡಿಕ್ಕಿ ಹೊಡೆದ ಕಾರು..ಕುಡಿದ ಮತ್ತಲ್ಲಿ ಯುವತಿಯ ರಂಪಾಟ.ಪೊಲೀಸರ ಜೊತೆಗೆ ವಾಗ್ವಾದ.ಇದು ಒಂದು ಕಡೆಯ ದೃಶ್ಯವಾದ್ರೆ ಮತ್ತೊಂದು ಕಡೆಯ ವಿಡಿಯೋ ಭಯಾನಕವಾಗಿದೆ. ಕುಡಿದ ಮತ್ತಲ್ಲಿ ಕಾರು ಹತ್ತಿ ಬಂದವರು ಸೀದಾ ಸೀದಾ ಬಂದು ಮರಕ್ಕೆ ಡಿಕ್ಕಿ ಹೊಡೆದಿದ್ದು. ಡಿಕ್ಕಿ ರಭಸಕ್ಕೆ ಮರ ಸಂಪೂರ್ಣ ನೆಲಕಚ್ಚಿತ್ತು. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಬೆಚ್ಚಿ ಬೀಳಿಸುವಂತಿದೆ.ಪಾರ್ಟಿ ಪಬ್ಬು ಅಂತಾ ಓಡಾಡೋರ ಸಂಖ್ಯೆಗೇನು ಕಮ್ಮಿ ಇರಲ್ಲ.ಕಂಠ ಪೂರ್ತಿ ಕುಡಿದು ವಾಲಾಡೋರಿಗೇನು ಬರವಿಲ್ಲ..ಆದ್ರೆ ಕುಡಿದ ಮತ್ತಲ್ಲಿ ಕಾರು ಚಾಲನೆ ಮಾಡಿಕೊಂಡು ಬಂದವರು ಅವಾಂತರ ಮಾಡಿಕೊಂಡಿದ್ದಾರೆ‌‌. ಆಗಿದ್ದೇನಂದ್ರೆ ನಿನ್ನೆ ಮಧ್ಯ ರಾತ್ರಿಯ ಸಮಯ. ಪಶ್ಚಿಮ‌ ಬಂಗಾಳದ ಇಬ್ಬರು ಯುವತಿಯರು ಹಾಗೂ ಓರ್ವ ಯುವಕ. ಕುಡಿದು ಕಾರಲ್ಲಿ‌ ಹೋಗ್ತಿದ್ರು. ಆಡುಗೋಡಿ ಪಾಸ್ ಪೋರ್ಟ್ ಆಫೀಸ್ ರಸ್ತೆಯ ಬಳಿ ಬರ್ತಿದ್ದಂತೆ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂದಿನ ಎರಡು ಸೀಟ್ ಗಳ ಏರ್ ಬ್ಯಾಗ್ ಓಪನ್ ಆಗಿದೆ.

ಮುಂದೆ ಕುಂತಿದ್ದ ಯುವತಿ, ಯುವಕನಿಗೆ ಗಾಯವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಆಡುಗೋಡಿ ಸಂಚಾರ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ರು. ಕಾರಿನಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿದೆ. ಮಧ್ಯದ ನಶೆಯಲ್ಲಿ ತೆಲಾಡ್ತಿದ್ದ ಯುವತಿಯರು. ಸಾರ್ವಜನಿಕರು, ಪೊಲೀಸರ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ಆಡುಗೋಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀ ಕುಡಿಯೋಕೆ ಬಂದು ಆ್ಯಕ್ಸಿಡೆಂಟ್, ಭಾವ ಸಾವು, ಬಾಮೈದಗೆ ಗಾಯ