Publish Date: Thu, 08 Jul 2021 (14:09 IST)
Updated Date: Thu, 08 Jul 2021 (14:12 IST)
ಆಸ್ತಿಗಾಗಿ ಹೆತ್ತ ತಂದೆಯನ್ನೇ ಮಗ ಮನೆಯಿಂದ ಹೊರ ಹಾಕಿದ ಅಮಾನವೀಯ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.
ರಾಮನಗರದ ಸಿಂಗ್ರಿಬೋವಿದೊಡ್ಡಿ ಗ್ರಾಮದ ನಿವಾಸಿ ಕೆಎಸ್ ಆರ್ ಟಿಸಿ ಚಾಲಕ ಕುಮಾರ್, ತಂದೆ ತಿಮ್ಮಯ್ಯ ಅವರನ್ನು ಮನೆಯಿಂದ ಹೊರಹಾಕಿದ ಪಾಪಿ ಮಗ.
ಮನೆಯನ್ನು ತನ್ನ ಹೆಸರಿಗೆ ಬರೆದುಕೊಡಲಿಲ್ಲ ಎಂದು ಸಿಟ್ಟಿಗೆದ್ದ ಮಗ ತಂದೆಯನ್ನು ಮನೆಯಿಂದ ಹೊರಗೆ ಎತ್ತಿ ಎಸೆದಿದ್ದಾನೆ. ಮಗ ಹೊರಗೆ ಹಾಕಿದ್ದರಿಂದ ಬೇರೆಯವರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.