Select Your Language

Notifications

webdunia
webdunia
webdunia
webdunia

ದರ್ಪ, ದೌರ್ಜನ್ಯ ತೋರುತ್ತಿದ್ದ ಪಿಎಸ್ ಐ ಅಮಾನತು!

bangalore
bangalore , ಗುರುವಾರ, 8 ಜುಲೈ 2021 (14:05 IST)
ಸಿಗರೇಟು ಸೇದುತ್ತಿದ್ದ ವ್ಯಕ್ತಿಯಿಂದ 5 ಸಾವಿರ ರೂ. ಕಸಿದಿದ್ದು ಸೇರಿದಂತೆ ನಾನಾ ಆರೋಪಗಳ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಹಡಗಲಿ ಪಿಎಸ್ ಐ ಎಸ್.ಪಿ. ನಾಯ್ಕ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಪೊಲೀಸ್ ಅಧಿಕಾರಿಯಾಗಿ ಕರ್ತವ್ಯದ ವೇಳೆ ಸಾರ್ವಜನಿಕರ ಮೇಲೆ ದರ್ಪ ಹಾಗೂ ದೌರ್ಜನ್ಯ ಕರ್ತವ್ಯ ಲೋಪದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.
ರಾಜೇಂದ್ರ ನಾಯ್ಕ ಎಂಬ ವ್ಯಕ್ತಿಯನ್ನು ಅಶ್ಲೀಲವಾಗಿ ನಿಂದಿಸಿದ್ದೂ ಅಲ್ಲದೇ ಹಲ್ಲೆ ಮಾಡಿದ್ದರು. ಅಲ್ಲದೇ ಮರಳು ಲಾರಿ ಚಾಲಕನ ಬಳಿ 10 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಸೀಗೆರೇಟು ಸೇದಿದ ವ್ಯಕ್ತಿಯಿಂದ 5 ಸಾವಿರ ರೂ. ಕಸಿದುಕೊಂಡ ಆರೋಪಗಳು ತನಿಖೆ ವೇಳೆ ರುಜುವಾತಾಗಿತ್ತು.
ಹಡಗಲಿ ಠಾಣಾ ವ್ಯಾಪ್ತಿಯಲ್ಲಿ ಇಸ್ಪಿಟ್ ಜೂಜು ನಡೆದರೆ ಕ್ರಮ ತೆಗೆದುಕೊಂಡಿರಲಿಲ್ಲ. ಈ ಎಲ್ಲ ಆರೋಪಗಳನ್ನ ಪರಿಶೀಲಿಸಿ ಪಿಎಸ್ ಐ ಅವರನ್ನು ಅಮಾನತು ಮಾಡಿ ಬಳ್ಳಾರಿ ಎಸ್ ಪಿ ಆದೇಶ ಹೊರಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಕಲಿ ದಾಖಲೆ ನೀಡಿ 12.50 ಲಕ್ಷ ರೇಷನ್ ಕಾರ್ಡ್ ಪತ್ತೆ!