Select Your Language

Notifications

webdunia
webdunia
webdunia
webdunia

ತೈಲ ದರ ಹೆಚ್ಚಳ ಖಂಡಿಸಿ ಪ್ರತಿಭಟನೆ

ತೈಲ ದರ ಹೆಚ್ಚಳ ಖಂಡಿಸಿ ಪ್ರತಿಭಟನೆ
bangalore , ಬುಧವಾರ, 7 ಜುಲೈ 2021 (17:43 IST)
ತೈಲ ದರ ಹೆಚ್ಚಳ ಖಂಡಿಸಿ  ಕೆಆರ್ ಪುರ ಹಾಗೂ‌ನ ಮಹದೇವಪುರದಲ್ಲಿ  ಸೈಕಲ್ ಹಾಗೂ  ಜಟಕಾ ಬಂಡಿಯಲ್ಲಿ  ಜಾಥಾ ನಡೆಸುವ ಮೂಲಕ  ಪೆಟ್ರೋಲ್ , ಡಿಸೇಲ್  ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿದರು . ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಎಂಎಲ್ ಸಿ ನಾರಾಯಣಸ್ವಾಮಿ,   74  ವರ್ಷಗಳ ಸ್ವತಂತ್ರ ಭಾರತದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ತೈಲ  ಬೆಲೆ ಏರಿಕೆಯಾಗಿದ್ದು ಇದು ಜನಸಾಮಾನ್ಯರ ಮೇಲೆ ಬರೆ ಎಳೆದಂತಾಗಿದೆ ಕರೋನಾ  ಸಂಕಷ್ಟ ಸಮಯದಲ್ಲೂ ಈ ಏರಿಕೆ ಖಂಡನೀಯ .ಈ ಹಿಂದೆ ಪೆಟ್ರೋಲ್ ಡೀಸೆಲ್ ಬೆಲೆ ಪೈಸೆ ಲೆಕ್ಕದಲ್ಲಿ ಹೆಚ್ಚಳಕ್ಜೆ  ಬಿಜೆಪಿ  ರೋಡ್ ನಲ್ಲಿ ಕುಳಿತು ಪ್ರತಿಭಟನೆ ಮಾಡ್ತಿದ್ರು . ಹಾಗೀನ  ಡಾ . ಮನಮೋಹನ್ ಸಿಂಗ್ ಆಡಳಿತದಲ್ಲಿ   ತೈಲ ತೆರಿಗೆ 9 ರೂ ಗಳವರೆಗೆ ವಿಧಿಸಲಾಗಿತ್ತು  , ಆದರೆ ಈಗಿನ ಬಿಜೆಪಿ ಸರ್ಕಾರ ಬರೋಬ್ಬರಿ 34 ರೂ  ತೆರಿಗೆ ಹೇರಿರುವುದು  ಜನಸಾಮಾನ್ಯರಿಗೆ  ನುಂಗಲಾರದ ತುತ್ತಾಗಿದೆ  , ಈ ವಿಧಿಸಿರುವ ತೆರಿಗೆಯನ್ನು ಶೀಘ್ರದಲ್ಲೇ  ಇಳಿಸಬೇಕು ಎಂದು ಆಗ್ರಹಿಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವನಾಗಲು ಅನರ್ಹನಾಗಿದ್ದೇನೆ ಎಂದು ಹಿರಿಯ ಸಂಸದ ಜಿ.ಎಸ್.ಬಸವರಾಜು ಅಭಿಪ್ರಾಯ