Publish Date: Wed, 31 Mar 2021 (09:17 IST)
Updated Date: Wed, 31 Mar 2021 (09:19 IST)
ಬೆಂಗಳೂರು: ಸಿಡಿ ಲೇಡಿ ನ್ಯಾಯಾಲಯದ ಮುಂದೆ ಹಾಜರಾಗುತ್ತಿದ್ದಂತೇ ಇತ್ತ ಶಾಸಕ ರಮೇಶ್ ಜಾರಕಿಹೊಳಿ ದೇವರ ಮೊರೆ ಹೋಗಿದ್ದಾರೆ.
ಸಿಡಿ ಲೇಡಿಯ ಆರೋಪಗಳ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಬಂಧನದ ಭೀತಿಯಲ್ಲಿದೆ. ನಿನ್ನೆ ಬೆಳಿಗ್ಗೆಯೇ ಬೆಳಗಾವಿಗೆ ತೆರಳಿದ್ದ ರಮೇಶ್ ಜಾರಕಿಹೊಳಿ ಸಂಜೆ ಕೊಲ್ಲಾಪುರದ ಮಹಾಲಕ್ಷ್ಮಿ ದೇವಾಲಯಕ್ಕೆ ಭೇಟಿ ಮಾಡಿ ಈ ಪ್ರಕರಣ ತಮಗೆ ಯಾವುದೇ ತೊಂದರೆಯಾಗದಂತೆ ಪ್ರಾರ್ಥನೆ ನಡೆಸಿದ್ದಾರೆ.
ಸ್ವತಃ ಯುವತಿಯೇ ಬಂದು ತನಗಾದ ಅನ್ಯಾಯ ಹೇಳಿಕೊಂಡ ಮೇಲೂ ರಮೇಶ್ ಜಾರಕಿಹೊಳಿಯವರನ್ನು ಯಾಕೆ ಬಂಧಿಸಿಲ್ಲ ಎಂದು ಕಾಂಗ್ರೆಸ್ ಸರಣಿ ಟ್ವೀಟ್ ಮೂಲಕ ಸರ್ಕಾರವನ್ನು ಪ್ರಶ್ನೆ ಮಾಡಿದೆ. ಇನ್ನು, ಜಾರಕಿಹೊಳಿ ಪ್ರಕರಣದ ಬಗ್ಗೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವಾಗ ಎಚ್ಚರಿಕೆಯಿಂದಿರಬೇಕು ಎಂದು ಬಿಜೆಪಿ ಶಾಸಕರಿಗೆ ಸಿಎಂ ಬಿಎಸ್ ವೈ ಸೂಚನೆ ನೀಡಿದ್ದಾರೆ.