Publish Date: Wed, 31 Mar 2021 (09:02 IST)
Updated Date: Wed, 31 Mar 2021 (09:04 IST)
ಕೊಚ್ಚಿ: ಕೇರಳ ವಿಧಾನಸಭೆ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಆಡಳಿತಾರೂಢ ಸಿಪಿಎಂ ಪಕ್ಷದ ಮಾಜಿ ಸಂಸದ ಜೋಯ್ಸ್ ಜಾರ್ಜ್ ನೀಡಿದ ಹೇಳಿಕೆಯೊಂದು ಈಗ ವಿವಾದಕ್ಕೆ ಕಾರಣವಾಗಿದೆ.
ಚುನಾವಣಾ ಪ್ರಚಾರ ವೇಳೆ ಜೋಯ್ಸ್ ಮಹಿಳೆಯರೇ ರಾಹುಲ್ ಗಾಂಧಿ ಬಳಿ ಹೋಗುವ ಮೊದಲು ಹುಷಾರ್. ಅವರಿಗಿನ್ನೂ ಮದುವೆಯಾಗಿಲ್ಲ ಎಂದು ಕಿಚಾಯಿಸಿದ್ದರು. ಕೆಲವು ದಿನಗಳ ಹಿಂದೆ ರಾಹುಲ್ ಕೊಚ್ಚಿಯ ಕಾಲೇಜೊಂದರಲ್ಲಿ ಮಹಿಳೆಯರಿಗೆ ಒತ್ತಡ ತಡೆದುಕೊಳ್ಳುವ ಶಕ್ತಿ ಹೇಗಿರುತ್ತದೆ ಎಂದು ಪ್ರಾತ್ಯಕ್ಷಿಕೆ ಮೂಲಕ ಮಾಡಿ ತೋರಿಸಿದ್ದರು. ಇದನ್ನು ಉಲ್ಲೇಖಿಸಿ ಜೋಯ್ಸ್ ವ್ಯಂಗ್ಯ ಮಾಡಿದ್ದಾರೆ.
ರಾಹುಲ್ ಗಾಂಧಿ ಯಾವತ್ತೂ ಮಹಿಳೆಯರ ಕಾಲೇಜಿನಲ್ಲೇ ಕಾರ್ಯಕ್ರಮ ಹಾಕಿಕೊಳ್ಳುತ್ತಾರೆ. ಹುಡುಗಿಯರಿಗೆ ಹೇಗೆ ನಿಲ್ಲಬೇಕು, ಕೂರಬೇಕು ಎಂದು ಕಲಿಸುತ್ತಾರೆ. ನನ್ನ ಪ್ರೀತಿಯ ಮಕ್ಕಳೇ.. ಅವರ ಬಳಿ ಹೋಗಬೇಡಿ. ಅಂತಹ ಕೆಲಸ ಮಾಡಬೇಡಿ. ಅವರಿಗಿನ್ನೂ ಮದುವೆಯಾಗಿಲ್ಲ ಎಂದಿದ್ದಾರೆ.
ಇದು ಕಾಂಗ್ರೆಸ್ ಆಕ್ರೋಶಕ್ಕೆ ಕಾರಣವಾಗಿದೆ. ತಮ್ಮ ನಾಯಕನ ವಿರುದ್ಧ ಇಂತಹ ಕೀಳು ಹೇಳಿಕೆ ಕೊಟ್ಟ ನಾಯಕನನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದೆ.