Publish Date: Wed, 16 Nov 2022 (18:32 IST)
Updated Date: Wed, 16 Nov 2022 (18:34 IST)
ಗುಂಬಜ್ ಮಾದರಿಯ ಬಸ್ ನಿಲ್ದಾಣ ವಿವಾದ ಮೈಸೂರಿನಲ್ಲಿ ಸಂಸದ ಪ್ರತಾಪ್ಸಿಂಹ ವಿರುದ್ಧ ಶಾಸಕ ರಾಮದಾಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗೂಗಲ್ ಫೋಟೋ ರಿಲೀಸ್ ಮಾಡಿ, ಸಂಸದರು ಒಡೆಯುತ್ತೀನಿ ಎಂದ ಮೇಲೆ ಕಳಶ ನಿರ್ಮಿಸಿಲ್ಲ. ಕೆಲವರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಪ್ರತಾಪ್ ಸಿಂಹ ಹೇಳಿರುವಂತೆ ರಾತ್ರೋರಾತ್ರಿ ಕಳಸ ನಿರ್ಮಾಣ ಮಾಡಿಲ್ಲ, ಯಾವುದೇ ಧರ್ಮದ ಆಧಾರದ ಮೇಲೆ ಬಸ್ ನಿಲ್ದಾಣ ನಿರ್ಮಿಸಿಲ್ಲ. ಮೈಸೂರಿನ ಬಸ್ ನಿಲ್ದಾಣಗಳನ್ನ ಮುಸ್ಲಿಂ ಶೈಲಿಯ ಗುಂಬಜ್ಗಳ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ ಎಂಬ ಪ್ರತಾಪ್ ಸಿಂಹ ಆರೋಪಕ್ಕೆ ರಾಮದಾಸ್ ತಿರುಗೇಟು ನೀಡಿದ್ದಾರೆ. ಮೈಸೂರಿನ ಪಾರಂಪರಿಕ ಮಹತ್ವ ಸಾರಲು ಮೈಸೂರು ಅರಮನೆಯ ಮಾದರಿಯಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ತಪ್ಪಾಗಿ ಅರ್ಥೈಸುವ ಹುನ್ನಾರ ನಡೆದಿದೆ. 10 ಲಕ್ಷ ವೆಚ್ಚದ ಬಸ್ ನಿಲ್ದಾಣ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ. ಇದನ್ನು ಮಹದೇವ್ ಎಂಬ ಗುತ್ತಿಗೆದಾರನಿಗೆ ನೀಡಲಾಗಿದೆ. ಬಸ್ ನಿಲ್ದಾಣಗಳ ವಿನ್ಯಾಸಕ್ಕೆ ಸಂಬಂಧಿಸಿದಂತೆ ತಜ್ಞರ ಸಮಿತಿ ರಚಿಸಲಿ. ಸಮಿತಿ ವರದಿಯಲ್ಲಿ ತಪ್ಪಿದ್ದರೆ ಬದಲಾವಣೆ ಮಾಡಲು ನಮ್ಮ ಅಭ್ಯಂತರ ಇಲ್ಲ ಎಂದು ಶಾಸಕ ರಾಮದಾಸ್ ಪತ್ರದ ಮೂಲಕ ಪುನರ್ ಸ್ಪಷ್ಟನೆ ನೀಡಿದ್ದಾರೆ.