Publish Date: Wed, 16 Nov 2022 (17:50 IST)
Updated Date: Wed, 16 Nov 2022 (17:54 IST)
ಬಿಜೆಪಿ ರಾಜ್ಯಸಭೆ ಸದಸ್ಯರಾದ ಲೆಹರ್ ಸಿಂಗ್ ಟ್ವೀಟ್ ಬಿಜೆಪಿ ನಾಯಕರ ನಿದ್ದೆಗೆಡಿಸಿದೆ. ಟಿಕೆಟ್ ನೀಡುವ ವಿಚಾರದಲ್ಲಿ ಗುಜರಾತ್ ಮಾಡೆಲ್ ಕರ್ನಾಟಕದಲ್ಲೂ ಜಾರಿ ಮಾಡುವಂತೆ ಲೆಹರ್ ಸಿಂಗ್ ಒತ್ತಾಯಿಸಿದ್ದಾರೆ. ಗುಜರಾತ್ನಲ್ಲಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಹಿರಿಯ ನಾಯಕರನ್ನು ಕೈ ಬಿಡಲಾಗಿದೆ. ಮಾಜಿ ಸಿಎಂ ವಿಜಯ್ ರೂಪಾನಿ, ಮಾಜಿ ಡಿಸಿಎಂ ನಿತಿನ್ ಪಟೇಲ್ ಹಾಗೂ ಕೆಲ ಮಾಜಿ ಸಚಿವರಿಗೆ ಟಿಕೆಟ್ ನೀಡಿಲ್ಲ. ಜಗದೀಶ್ ಶೆಟ್ಟರ್, ವಿ. ಸೋಮಣ್ಣ , ಗೋವಿಂದ ಕಾರಜೋಳ, ಈಶ್ವರಪ್ಪ, ಕೆ.ಜಿ ಭೋಪಯ್ಯ, ಸುರೇಶ್ ಕುಮಾರ್, ತಿಪ್ಪಾರೆಡ್ಡಿ, ಎಂಟಿಬಿ, ಸಿದ್ದು ಸವದಿ ಅಂತಹ ಫಸ್ಟ್ ಜನರೇಷನ್ ಲೀಡರ್ಸ್ ಮುಂದಿನ ಚುನಾವಣೆಯನ್ನು ಎದುರಿಸುವುದು ಕಷ್ಟವಾಗುತ್ತದೆ. ಹೊಸ ಮುಖಕ್ಕೆ ಅವಕಾಶ ಕೊಡಿ ಎಂದಿರುವ ಲೆಹರ್ ಸಿಂಗ್ ವಿರುದ್ಧ ಬಿಜೆಪಿ ಹಿರಿಯ ನಾಯಕರು ಕಿಡಿಕಾರಿದ್ದಾರೆ. ಲೆಹರ್ ಸಿಂಗ್ ಟ್ವೀಟ್ನಿಂದ ಬಿಜೆಪಿ ಹಿರಿಯ ನಾಯಕರಿಗೆ ಬೇಸರವಾಗಿದೆ. ಚುನಾವಣೆಗೂ ಮೊದಲೇ ಲೆಹರ್ ಸಿಂಗ್ ಮಾಡಿರುವ ಟ್ವೀಟ್ ಬಿಜೆಪಿ ಹಿರಿಯ ನಾಯಕರಿಗೆ ಗೊಂದಲ ಉಂಟುಮಾಡಿದೆ.