Select Your Language

Notifications

webdunia
webdunia
webdunia
webdunia

ಅನುಚಿತವಾಗಿ ವರ್ತಿಸುತ್ತಿದ್ದ ವೈದ್ಯ ಅರೆಸ್ಟ್​​​

A doctor who was behaving inappropriately was arrested
bangalore , ಬುಧವಾರ, 16 ನವೆಂಬರ್ 2022 (17:57 IST)
ಆಸ್ಪತ್ರೆಗೆ ಬಂದ ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದ ವೈದ್ಯನೊಬ್ಬನ‌ನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಯಶವಂತಪುರದ ಮತ್ತಿಕೆರೆಯ ನ್ಯಾಚುರೋಪತಿ ಮತ್ತು ಅಕ್ಯುಪಂಕ್ಚರ್ ವೈದ್ಯ ವೆಂಕಟರಮಣನನ್ನು ಬಂಧಿಸಲಾಗಿದೆ. ಚಿಕಿತ್ಸೆ ನೆಪದಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದನೆಂದು ತಿಳಿದ ಮೇಲೆ ವೈದ್ಯನ ಮೊಬೈಲ್ ಪರಿಶೀಲಿಸಿ ಬಂಧಿಸಿದ್ದಾರೆ. ಅಪ್ರಾಪ್ತ ಹೆಣ್ಣು ಮಕ್ಕಳ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದನೆಂದು ತಿಳಿದು ಬಂದಿದೆ. ಯಶವಂತಪುರ ಪೊಲೀಸ್ ಠಾಣೆಗೆ ಮಹಿಳೆಯೊಬ್ಬರು ದೂರು ನೀಡಿದ್ದು, ದೂರಿನನ್ವಯ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡು‌ ಸಿಸಿಬಿಗೆ ವರ್ಗಾವಣೆ ಮಾಡಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಲೆಹರ್ ಸಿಂಗ್ ಟ್ವೀಟ್​ಗೆ ನಾಯಕರ ಬೇಸರ...!