ಬೆಂಗಳೂರು: ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ನಿಮಿತ್ತ ಇಡೀ ದೇಶದಲ್ಲಿ ಸಂಭ್ರಮ ಮನೆ ಮಾಡಿದೆ. ಇದೀಗ ಬೆಂಗಳೂರಿನ ಮಾಲ್ ಗಳಲ್ಲೂ ರಾಮಮಂದಿರದ ಪ್ರತಿಕೃತಿ ಇಡಲು ತೀರ್ಮಾನಿಸಲಾಗಿದೆ.
ಈಗಾಗಲೇ ಹಿಂದೂ ಕಾರ್ಯಕರ್ತರು ಬೆಂಗಳೂರಿನ ಪ್ರಮುಖ ಮಾಲ್ ಗಳ ಮುಖ್ಯಸ್ಥರ ಜೊತೆ ಸಭೆ ನಡೆಸಿ ರಾಮಮಂದಿರ ಪ್ರತಿಕೃತಿ ಇಟ್ಟು, ಮಂದಿರ ಉದ್ಘಾಟನೆ ಕಾರ್ಯಕ್ರಮವನ್ನು ಲೈವ್ ಆಗಿ ಬಿತ್ತಿರಿಸಲು ಮನವಿ ಮಾಡಿದ್ದಾರೆ. ಇದಕ್ಕೆ ಮಾಲ್ ಗಳ ಮುಖ್ಯಸ್ಥರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಕ್ರಿಸ್ ಮಸ್ ಸಂದರ್ಭದಲ್ಲಿ ಕ್ರಿಸ್ ಮಸ್ ಟ್ರೀಯನ್ನು ಮಾಲ್ ಗಳಲ್ಲಿ ಇಡಲಾಗುತ್ತದೆ. ಇದು ಜನಾಕರ್ಷಣೆಯ ಕೇಂದ್ರ ಬಿಂದುವಾಗುತ್ತದೆ. ಎಷ್ಟೋ ಜನ ಇದರ ಮುಂದೆ ಸೆಲ್ಫೀ ತೆಗೆದುಕೊಂಡು ಸಂಭ್ರಮಿಸುತ್ತಾರೆ.
ಅದೇ ರೀತಿ ರಾಮಮಂದಿರ ಲೋಕಾರ್ಪಣೆ ಸಂದರ್ಭ ಐತಿಹಾಸಿಕ ಕ್ಷಣವಾಗಿದ್ದು ಈ ಸಂದರ್ಭದಲ್ಲಿ ರಾಮಮಂದಿರದ ಪ್ರತಿಕೃತಿ ನಿರ್ಮಿಸಿ ಮಾಲ್ ಗಳಲ್ಲಿ ಇಡಲು ಮನವಿ ಮಾಡಲಾಗಿದೆ.