Publish Date: Wed, 03 May 2023 (17:40 IST)
Updated Date: Wed, 03 May 2023 (18:27 IST)
ಏಳು ಬಾರಿ ವಿಧಾನಸಭೆಗೆ ಆಯ್ಕೆಯಾಗಿರುವ ಕಾಂಗ್ರೆಸ್ ನ ಹಿರಿಯ ರಾಜಕಾರಣಿ, ರಾಮಲಿಂಗಾರೆಡ್ಡಿ ಎಂಟನೇ ಬಾರಿಗೆ ಶಾಸಕರಾಗಲು ಬಿಟಿಎಂ ವಿಧಾನಸಭಾ ಕ್ಷೇತ್ರದಿಂದ ಅಖಾಡಕ್ಕೆ ಇಳಿದ್ದಿದ್ದಾರೆ. ಇಂದು ಬಿಟಿಎಂ ಲೇಔಟ್ ನ ಮದ್ದೂರಮ್ಮ ಬಡಾವಣೆ, ಗುಂಡು ತೋಪು ಬಡಾವಣೆ, ಅಯ್ಯಪ್ಪ ದೇವಾಸ್ಥಾನ ಬೀದಿ ಸೇರಿದಂತೆ ವಿವಿಧ ಕಡೆ ಮತಯಾಚನೆ ನಡೆಸಿದ್ರು. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಭ್ರಷ್ಟ ಆಡಳಿತದಿಂದ ಜನ ಬೇಸತ್ತು ಹೋಗಿದ್ದಾರೆ ಈ ಸಾರಿ ಅವರಿಗೆ ಸರಿಯಾದ ಪಾಠ ಕಲಿಸುತ್ತಾರೇಂದು ಹೇಳಿದ್ರು .ಇನ್ನೂ ಕ್ರಿಮಿನಲ್ ಹಿನ್ನೆಲೆ ಯುಳ್ಳ ಅಭ್ಯರ್ಥಿ ಗಳನ್ನ ತಂದು ಅನ್ಯ ಪಕ್ಷಗಳು ಸ್ಫರ್ಧೆ ಮಾಡಿಸುತ್ತಿದ್ದಾರೆ ಇದು ಯಾವುದು ನಡೆಯೋದಿಲ್ಲ ಎಂದ್ರು.ಇನ್ನೂ ಇದೆ ಸಂಧರ್ಭದಲ್ಲಿ ಮಾತನಾಡಿದ ಪಾಲಿಕೆ ಮಾಜಿ ಸಮಸ್ಯ ಮಂಜುನಾಥ್ ರೆಡ್ಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ತುಂಬಾ ಶ್ರೇಷ್ಠ ವಾದದ್ದು ಹಾಗಾಗಿ ರಾಜ್ಯ ಸೇರಿದಂತೆ ಬೆಂಗಳೂರಿನ ಎಲ್ಲಾ ಯುವ ಜನತೆಗೆ ನಾನು ಮನವಿ ಮಾಡುತ್ತೇನೆ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಎಂದರು.