Select Your Language

Notifications

webdunia
webdunia
webdunia
webdunia

ಯಕಶ್ಚಿತ್ ಮಂತ್ರಿಗಿರಿಗೆ ಕಟ್ಟುಬೀಳಬೇಡಿ: ರಾಮಲಿಂಗಾರೆಡ್ಡಿಗೆ ಎಚ್‌ಡಿಕೆ ಸಲಹೆ

ಯಕಶ್ಚಿತ್ ಮಂತ್ರಿಗಿರಿಗೆ ಕಟ್ಟುಬೀಳಬೇಡಿ: ರಾಮಲಿಂಗಾರೆಡ್ಡಿಗೆ ಎಚ್‌ಡಿಕೆ ಸಲಹೆ
ಬೆಂಗಳೂರು , ಶನಿವಾರ, 9 ಸೆಪ್ಟಂಬರ್ 2017 (14:13 IST)
ಯಕಶ್ಚಿತ್ ಮಂತ್ರಿಗಿರಿಗೆ ಕಟ್ಟುಬೀಳಬೇಡಿ ಎಂದು ಗೃಹಸಚಿವ ರಾಮಲಿಂಗಾರೆಡ್ಡಿಯವರಿಗೆ ಸಲಹೆ ನೀಡಿದ್ದೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಇಂದು ನಡೆದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ತೋರಿಕೆಗೋಸ್ಕರ ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಅವರನ್ನು ದೂರವಿಡಲಾಗಿದೆ. ಆದರೆ, ಒಳಗೆ ನಡೆಯುತ್ತಿರುವುದೇ ಬೇರೆ ಎಂದು ವಾಗ್ದಾಳಿ ನಡೆಸಿದ್ದಾರೆ.
 
ಎಸ್‌ಐಟಿ ತಂಡ ರಚಿಸಿದಾಗ ಕಡತಕ್ಕೆ ಯಾರು ಸಹಿ ಮಾಡಿದ್ರು, ಆ ಸಂದರ್ಭದಲ್ಲಿ ರಾಮಲಿಂಗಾರೆಡ್ಡಿ ಎಲ್ಲಿದ್ದರು ಎನ್ನುವುದು ನನಗೆ ಗೊತ್ತಿದೆ. ರಾಮಲಿಂಗಾರೆಡ್ಡಿ ಅಂದರಿಕಿ ಮಂಚಿವಾಳ್ಳು ಎನ್ನುವಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
 
ಗೃಹ ಸಚಿವ ರಾಮಲಿಂಗಾರೆಡ್ಡಿ, ಕೆಂಪಯ್ಯ ಪ್ರಭಾವದಿಂದ ಹೊರಬರುವುದು ಅಷ್ಟು ಸುಲಭವಲ್ಲ. ಅದಕ್ಕೆ ರಾಜಕೀಯ ಇಚ್ಚಾಶಕ್ತಿ ಬೇಕಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.   

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿ ಮೇಯರ್, ಉಪಮೇಯರ್ ಚುನಾವಣೆಗೆ ಮುಹೂರ್ತ ಫಿಕ್ಸ್