Publish Date: Sat, 09 Sep 2017 (11:58 IST)
Updated Date: Sat, 09 Sep 2017 (12:02 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಹೊರತಾಗಿ ಹಲವು ಸಮಾಜುಮುಖಿ ಕೆಲಸ ಮಾಡಿ ಸುದ್ದಿ ಮಾಡಿದವರು. ಇದೀಗ ಹೊಸ ಕೆಲಸ ಮಾಡಲಿದ್ದಾರೆ. ಅದು ನಿರೂಪಕನ ಕೆಲಸ.
ಜೀ ಕನ್ನಡ ವಾಹಿನಿಯಲ್ಲಿ ಭಾನುವಾರ ಸಂಜೆ 6 ಗಂಟೆಗೆ ನಿರೂಪಕನ ಅವತಾರದಲ್ಲಿ ಯಶ್ ಕಾಣಿಸಿಕೊಳ್ಳಲಿದ್ದಾರೆ. ಪ್ರೇಕ್ಷಕರ ಗ್ಯಾಲರಿಯಲ್ಲಿ ಮಡದಿ ರಾಧಿಕಾ ಪಂಡಿತ್ ಕೂಡಾ ಇರುತ್ತಾರೆ.
ಯಶ್ ನಿರೂಪಿಸುತ್ತಿರುವುದು ನೀರು ಉಳಿಸಿ ಕಾರ್ಯಕ್ರಮವೊಂದನ್ನು. ಸದ್ಗುರು ವಾಸುದೇವ್ ಅವರು ದೇಶಾದ್ಯಂತ ನದಿಗಳ ರಕ್ಷಣೆಗೆ ಜಾಥಾ ನಡೆಸುತ್ತಿದ್ದಾರೆ. ಇವರ ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ ಕೈ ಜೋಡಿಸಿದೆ. ಇದೇ ವಿಚಾರವಾಗಿ ಯಶ್ ಸಂವಾದ ನಡೆಸಿದ್ದು, ನಿರೂಪಕನಾಗಿ ಕೆಲಸ ಮಾಡಿದ್ದಾರೆ.