Publish Date: Mon, 26 Jun 2017 (13:32 IST)
Updated Date: Mon, 26 Jun 2017 (13:34 IST)
ಬೆಂಗಳೂರು: ಯಶ್ ಬಗ್ಗೆ ಮಿ. ಆಫ್ ಎಂದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಕಿರಿಕ್ ಪಾರ್ಟಿ ಖ್ಯಾತಿಯ ನಾಯಕಿ ನಟಿ ರಶ್ಮಿಕಾ ಮಂದಣ್ಣ ಇದೀಗ ಕ್ಷಮೆ ಯಾಚಿಸಿದ್ದಾರೆ.
ಯಶ್ ಅಭಿಮಾನಿಗಳಿಗೆ ಈ ವಿಚಾರವನ್ನು ವಿವಾದ ಮಾಡಬೇಡಿ ಎಂದು ಫೇಸ್ ಬುಕ್ ನಲ್ಲಿ ಹೇಳಿಕೆ ನೀಡಿದ ಬೆನ್ನಲ್ಲೇ ನಟಿ ರಶ್ಮಿಕಾ ಕೂಡಾ ಫೇಸ್ ಬುಕ್ ನಲ್ಲಿ ಯಶ್ ಕ್ಷಮೆ ಯಾಚಿಸಿ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
‘ಯಶ್ ಸರ್ ಬಗ್ಗೆ ನನಗೆ ಅಪಾರ ಗೌರವವಿದೆ. ನನ್ನನ್ನೂ ಸೇರಿದಂತೆ ಹಲವರಿಗೆ ಯಶ್ ಸರ್ ಪ್ರತಿಭೆ ಪ್ರೇರಣೆ. ಅವರನ್ನು ಅವಮಾನಿಸುವುದು ನನ್ನ ಉದ್ದೇಶವಾಗಿರಲಿಲ್ಲ. ಕಾರ್ಯಕ್ರಮದ ಎಡಿಟ್ ಆದ ಭಾಗ ವಿವಾದವಾಗಿದೆ. ಪೂರ್ತಿ ಕ್ಲಿಪ್ಪಿಂಗ್ ನೋಡಿದ್ದರೆ ವಿವಾದವಾಗುತ್ತಿರಲಿಲ್ಲ’ ಎಂದು ರಶ್ಮಿಕಾ ಹೇಳಿಕೆ ನೀಡಿದ್ದಾರೆ. ಅಲ್ಲಿಗೆ ಸುಖಾ ಸುಮ್ಮನೇ ಎಬ್ಬಿದ ವಿವಾದ ತಣ್ಣಗಾದಂತಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ