Publish Date: Thu, 29 Jun 2017 (08:17 IST)
Updated Date: Thu, 29 Jun 2017 (08:22 IST)
ಬೆಂಗಳೂರು: ಬಹುಕೋಟಿ ವೆಚ್ಚದ ಕನ್ನಡ ಸಿನಿಮಾ ‘ಕುರುಕ್ಷೇತ್ರ’ ಆರಂಭದಲ್ಲಿ ಭಾರೀ ಸದ್ದು ಮಾಡಿತ್ತು. ಬಹುತಾರಾಗಣವಿರುತ್ತದೆ ಎಂದು ಪ್ರೇಕ್ಷಕರು ನಿರೀಕ್ಷೆ ಮಾಡಿದ್ದೇ ಬಂತು.
ದರ್ಶನ್ ಜತೆಗೆ ರವಿಚಂದ್ರನ್, ಸುದೀಪ್, ಉಪೇಂದ್ರ, ಅಂಬರೀಷ್ ಮುಂತಾದ ಘಟಾನುಘಟಿಗಳನ್ನು ಒಂದು ಗೂಡಿಸಲು ನಿರ್ಮಾಪಕರು ಯತ್ನಿಸುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಇವರ ಪೈಕಿ ದರ್ಶನ್, ರವಿಚಂದ್ರನ್ ಮಾತ್ರ ಅಭಿನಯಿಸುತ್ತಿರುವುದು ಪಕ್ಕಾ ಆಗಿದೆ.
ಉಳಿದಂತೆ ಸ್ಟಾರ್ ನಟರೆಲ್ಲಾ ಒಬ್ಬೊಬ್ಬರಾಗಿ ಜಾರಿಕೊಂಡಿದ್ದಾರೆ. ಲೇಟೆಸ್ಟ್ ಆಗಿ ರಾಕಿಂಗ್ ಸ್ಟಾರ್ ಯಶ್ ಕೂಡಾ ಕುರುಕ್ಷೇತ್ರ ಸಿನಿಮಾದಲ್ಲಿ ಆಕ್ಟಿಂಗ್ ಮಾಡಲು ನೋ ಎಂದಿದ್ದಾರೆ. ಸದ್ಯಕ್ಕೆ ಕೆಜಿಎಫ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ರಾಕಿಂಗ್ ಸ್ಟಾರ್ ಗೆ ಕುರುಕ್ಷೇತ್ರ ಮಾಡುವ ಮನಸ್ಸಿಲ್ಲವಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ